ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದರೆ ಮಾತ್ರ ಆ ಮನೆಯಲ್ಲಿ ಸಮಸ್ಯೆಗಳು ದೂರವಾಗಿ ಹಣದ ಮಳೆ ಸುರಿಯುತ್ತದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಅದರಲ್ಲಿ ನೆಲ ಒರೆಸುವಾಗ ಮಾಡುವ ತಪ್ಪುಗಳಿಂದ ಕೂಡ ಲಕ್ಷ್ಮಿ ಪ್ರವೇಶ ಮನೆಯೊಳಗೆ ಆಗುವುದಿಲ್ಲ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.
ಕೆಲವರು ಮನೆಯನ್ನು ಮಧ್ಯಾಹ್ನದ ವೇಳೆ ಒರೆಸುತ್ತಾರೆ. ಈ ರೀತಿ ಮಾಡಬೇಡಿ. ನೆಲ ಒರೆಸುವಾಗ ಮಧ್ಯಾಹ್ನ 12 ಗಂಟೆಯ ಬಳಿಕ ನೆಲವನ್ನು ಒರಿಸಬೇಡಿ. ಇದರಿಂದ ನಕರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ. ಆದ ಕಾರಣ ಮುಂಜಾನೆ ವೇಳೆ ನೆಲವನ್ನು ಒರೆಸಿದರೆ ನಿಮ್ಮ ಮನೆಯೊಳಗೆ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ. ಮುಂಜಾನೆ ವೇಳೆ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆ ಎನ್ನಲಾಗಿದೆ.
ಹಾಗೇ ಗುರುವಾರ ಮಾತ್ರ ನೆಲ ಒರೆಸಬೇಡಿ. ಯಾಕೆಂದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಗುರು ನೆಲೆಸಿರುತ್ತಾರೆ. ಗುರುವಾರ ನೆಲ ಒರೆಸಿದರೆ ಗುರು ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾರೆ. ಇದರಿಂದ ಗುರುವಿನ ಜೊತೆಗೆ ಲಕ್ಷ್ಮಿ ಕೃಪೆಯು ಸಿಗುವುದಿಲ್ಲ ಎನ್ನುತ್ತಾರೆ.