ಕೆಲವೊಮ್ಮ ಕುಟುಂಬದಲ್ಲಿ ಕೆಲವು ಸದಸ್ಯರು ಕಷ್ಟದ ಸಮಯವನ್ನು ಎದುರಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರ ಕಷ್ಟ ನೋಡಿ ನಾವು ಸುಮ್ಮನಾಗುವ ಬದಲು ಅವರಿಗೆ ಸಮಾಧಾನ ಹೇಳಬೇಕು. ಇದರಿಂದ ಅವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹಾಗಾಗಿ ನಿಮ್ಮ ಕುಟುಂಬದ ಸದಸ್ಯರು ನಿರಾಶೆಯಲ್ಲಿದ್ದಾಗ ಅವರನ್ನು ಈ ರೀತಿಯಲ್ಲಿ ಸಮಾಧಾನ ಪಡಿಸಿ.
ನಿಮ್ಮ ಕುಟುಂಬದ ವ್ಯಕ್ತಿ ಕೆಲಸದ ಕಾರಣ ಚಿಂತೆ ಮಾಡುತ್ತಿದ್ದರೆ ಅವರಿಗೆ ನಿಮಗೆ ಇಷ್ಟವಾದ ಕೆಲಸವನ್ನು ಮಾಡಿ. ನಿಮ್ಮ ಕನಸು ಮತ್ತು ಗುರಿ ಎರಡನ್ನೂ ಮನದಲ್ಲಿಟ್ಟುಕೊಂಡು ನಿಮಗೆ ಸೂಕ್ತವಾದ ಕೆಲಸವನ್ನು ಮಾಡಿ ಎಂದು ಸಲಹೆ ಮಾಡಿ.
ಹಾಗೇ ನಿಮ್ಮ ಮನಸ್ಸಿನಲ್ಲಿ ಏನಾದರೂ ಚಿಂತೆ ಇದ್ದರೆ ಅದನ್ನು ನನ್ನ ಬಳಿ ಸಂಕೋಚ, ಸಂದೇಹವಿಲ್ಲದೇ ಹೇಳಿಕೊಳ್ಳಬಹುದು ಎಂದು ತಿಳಿಸಿ. ಹಾಗೇ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸಿದರೆ ಅದರಿಂದ ನಾವು ಬಹಳಷ್ಟು ಕಲಿಯಬಹುದು ಎಂದು ಸಮಾಧಾನ ಪಡಿಸಿ. ಹಾಗೇ ಇದರಿಂದ ಮುಂದೆ ನಮಗೆ ಒಳಿತಾಗುತ್ತದೆ ಎಂದು ಹೇಳಿ. ಇದು ಅವರ ಮನಸ್ಸಿಗೆ ಹಿತವನ್ನು ನೀಡುತ್ತದೆ.
ಆದರೆ ಕುಟುಂಬದ ಸದಸ್ಯರು ನಿರಾಶೆಯಲ್ಲಿದ್ದರೆ ಅವರ ಜೊತೆ ಕೆಟ್ಟದಾಗಿ ವರ್ತಿಸಬೇಡಿ. ಅವರನ್ನು ಹೀಯಾಳಿಸಬೇಡಿ. ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರೆ ಅದನ್ನು ಆಲಿಸಿ, ಬದಲಾಗಿ ಅವರ ಜೊತೆ ಅನುಚಿತವಾಗಿ ವರ್ತಿಸಬೇಡಿ. ಹಾಗೇ ಅವರ ಭಾವನೆಗಳನ್ನು ನೋಯಿಸುವ ಕೆಲಸ ಮಾಡಬೇಡಿ. ಹಾಗೇ ಆ ಪರಿಸ್ಥಿತಿಯಿಂದ ಹೊರಗೆ ಬರಲು ಅವರಿಗೆ ಸಹಾಯ ಮಾಡಿ. ಅವರ ಜೊತೆ ಹೆಚ್ಚು ಸಮಯ ಕಳೆಯಿರಿ. ಇದರಿಂದ ಅವರು ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ.