alex Certify ದೇಹದಲ್ಲಿ ಕಬ್ಬಿಣದಂಶ ಕಡಿಮೆಯಿದ್ರೆ ಈ ಪಾತ್ರೆಯಲ್ಲಿ ಆಹಾರ ತಯಾರಿಸಿ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿ ಕಬ್ಬಿಣದಂಶ ಕಡಿಮೆಯಿದ್ರೆ ಈ ಪಾತ್ರೆಯಲ್ಲಿ ಆಹಾರ ತಯಾರಿಸಿ ಸೇವಿಸಿ

ಹಿಂದೆ ಜನರು ಕಬ್ಬಿಣದ ಪಾತ್ರೆಗಳನ್ನು ಹೆಚ್ಚು ಬಳಸುತ್ತಿದ್ದರು. ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಾರುಕಟ್ಟೆಗೆ, ಉಕ್ಕು, ನಾನ್ ಸ್ಟಿಕ್ ಸೇರಿದಂತೆ ನಾನಾ ಬಗೆಯ ಪಾತ್ರೆಗಳು ಲಗ್ಗೆಯಿಟ್ಟಿವೆ. ಆದ್ರೆ ಹಿಂದಿನ ಕಾಲದಲ್ಲಿ ಬಳಸ್ತಿದ್ದ ಕಬ್ಬಿಣದ ಪಾತ್ರೆಯಷ್ಟು ಉತ್ತಮವಾದ ಪಾತ್ರೆ ಯಾವುದೂ ಇಲ್ಲ.

ಕಬ್ಬಿಣದ ಪಾತ್ರೆಗಳಲ್ಲಿ ಆಹಾರ ತಯಾರಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಕಬ್ಬಿಣದ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿ ತಿಂದರೆ, ದೇಹದಲ್ಲಿ ಕಬ್ಬಿಣದ ಸಮಸ್ಯೆ ಎದುರಾಗುವುದಿಲ್ಲ. ಇದು ಆರೋಗ್ಯ ವೃದ್ಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕಬ್ಬಿಣದ ಪಾತ್ರೆಯನ್ನು ಅಡುಗೆಯಲ್ಲಿ ಸರಿಯಾಗಿ ಬಳಸಿದರೆ, ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಕಾಪಾಡಬಹುದೆಂದು ವರದಿಯಲ್ಲಿ ಹೇಳಲಾಗಿದೆ.

ಕಬ್ಬಿಣದ ಪಾತ್ರೆಯಲ್ಲಿ ಯಾವುದೇ ಆಹಾರವನ್ನು ನೀವು ತಯಾರಿಸಬಹುದು. ಹೆಚ್ಚು ಹುಳಿ ಪದಾರ್ಥಗಳನ್ನು ಬೇಯಿಸಬಾರದು. ಕಬ್ಬಿಣದ ತವಾದಲ್ಲಿ ರೊಟ್ಟಿ, ಚಪಾತಿ, ದೋಸೆಯನ್ನು ಬೇಯಿಸಿ ಸೇವನೆ ಮಾಡಬಹುದು. ಇದು ಆಹಾರದಲ್ಲಿ ಕಬ್ಬಿಣದ ಗುಣಗಳನ್ನು ಹೆಚ್ಚಿಸುವುದಲ್ಲದೆ, ಸುವಾಸನೆಯನ್ನು ಹೆಚ್ಚಿಸುತ್ತದೆ.

ನೀರು ಅಥವಾ ಯಾವುದೇ ಇತರ ಪಾನೀಯವನ್ನು ಕಬ್ಬಿಣದ ಪಾತ್ರೆಗಳಲ್ಲಿ ಇಡಬಾರದು. ಕಬ್ಬಿಣವು ತೇವಾಂಶದೊಂದಿಗೆ ಪ್ರತಿಕ್ರಿಯಿಸಿ, ತುಕ್ಕನ್ನು ಉತ್ಪಾದಿಸುತ್ತದೆ.

ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಿದ ಯಾವುದೇ ಆಹಾರವನ್ನು ತಕ್ಷಣವೇ ಬೇರೆ ಯಾವುದೇ ಪಾತ್ರೆಗೆ, ವಿಶೇಷವಾಗಿ ಗಾಜಿನ ಪಾತ್ರೆಗೆ ವರ್ಗಾಯಿಸಬೇಕು.

ಹುಳಿ ಅಥವಾ ಆಮ್ಲೀಯ ಆಹಾರಗಳು ಕಬ್ಬಿಣದೊಂದಿಗೆ ಪ್ರತಿಕ್ರಿಯಿಸುತ್ತವೆ. ಇದು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ, ಕಬ್ಬಿಣದ ಪಾತ್ರೆಯಲ್ಲಿ ಕರಿ, ರಸಂ, ಸಾಂಬಾರ್, ಟೊಮೆಟೊಗಳಿಂದ ಮಾಡಿದ ಆಹಾರವನ್ನು ತಯಾರಿಸಬಾರದು.

ಕಬ್ಬಿಣದ ಪಾತ್ರೆಗಳನ್ನು ತೊಳೆದು ತಕ್ಷಣ ಒರೆಸಬೇಕು. ಒರಟಾದ ಸ್ಕ್ರಬ್ಬರ್ ಬಳಸಬೇಡಿ. ಪಾತ್ರೆಗಳನ್ನು ಯಾವಾಗಲೂ ಸ್ವಚ್ಛ ಮತ್ತು ಶುಷ್ಕ ಸ್ಥಳದಲ್ಲಿ ಇರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...