alex Certify ಪಠ್ಯದಲ್ಲಿ ʼರಾಮಾಯಣʼ ಸೇರಿಸಬಹುದಾದರೆ ʼಖುರಾನ್‌ʼ ಯಾಕೆ ಬೇಡ…? ಕಾಂಗ್ರೆಸ್‌ ಶಾಸಕನ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಠ್ಯದಲ್ಲಿ ʼರಾಮಾಯಣʼ ಸೇರಿಸಬಹುದಾದರೆ ʼಖುರಾನ್‌ʼ ಯಾಕೆ ಬೇಡ…? ಕಾಂಗ್ರೆಸ್‌ ಶಾಸಕನ ಪ್ರಶ್ನೆ

ರಾಮಾಯಣ ಹಾಗೂ ಮಹಾಭಾರತದ ಕತೆಗಳನ್ನು ರಾಜ್ಯದ ಇಂಜಿನಿಯರಿಂಗ್​ ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಮಧ್ಯ ಪ್ರದೇಶ ಸರ್ಕಾರ ಘೋಷಣೆ ಮಾಡಿರುವ ಬೆನ್ನಲ್ಲೇ ಭೋಪಾಲ್​​ನ ಕಾಂಗ್ರೆಸ್​ ಶಾಸಕ ಆರಿಫ್​ ಮಸೂದ್​​ ಕುರಾನ್​ ಹಾಗೂ ಇತರೆ ಧರ್ಮಗಳ ಮಹಾಕಾವ್ಯಗಳನ್ನೂ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಧ್ಯಪ್ರದೇಶ ಸರ್ಕಾರ ಮಹಾಭಾರತ ಹಾಗೂ ರಾಮಾಯಣ ಮಹಾಕಾವ್ಯಗಳನ್ನು ಇಂಜಿನಿಯರಿಂಗ್​ ಪಠ್ಯಕ್ರಮದಲ್ಲಿ ಸೇರಿಸುವುದಾಗಿ ಹೇಳಿದೆ. ಆದರೆ ಅವರು ಕುರಾನ್​, ಬೈಬಲ್​, ಗುರುಗ್ರಂಥ ಸಾಹೇಬ್​ ಹೀಗೆ ಎಲ್ಲಾ ಧರ್ಮಗಳ ಗ್ರಂಥಗಳನ್ನೂ ಸೇರಿಸಬೇಕು. ಭಾರತದಲ್ಲಿ ಸರ್ವ ಧರ್ಮಕ್ಕೂ ಸಮಾನತೆ ಇದೆ. ಇದೊಂದು ಜಾತ್ಯಾತೀತ ರಾಷ್ಟ್ರವಾಗಿದೆ. ಈ ನಡುವೆ ಮಧ್ಯಪ್ರದೇಶ ಸರ್ಕಾರದ ಈ ಘೋಷಣೆಯು ನಮ್ಮ ಸಂವಿಧಾನಕ್ಕೆ ಸೂಕ್ತವಾಗಿಲ್ಲ ಎಂದು ಆರಿಫ್​ ಮಸೂದ್​ ಹೇಳಿದ್ರು.

ಈ ನಡುವೆ ಬಿಜೆಪಿಯು ಕಾಂಗ್ರೆಸ್​ ಶಾಸಕರ ಈ ಹೇಳಿಕೆಯನ್ನು ‘ಆಯ್ದ ಜಾತ್ಯಾತೀತತೆ ’ ಎಂದು ಜರಿದಿದೆ. ಸೆಪ್ಟೆಂಬರ್​ 13ರಂದು ಮಧ್ಯ ಪ್ರದೇಶದ ಉನ್ನತ ಶಿಕ್ಷಣ ಸಚಿವ ಮೋಹನ್​ ಯಾದವ್​ ರಾಮಾಯಣ, ಮಹಾಭಾರತ ಹಾಗೂ ರಾಮಚರಿತಮಾನಸವನ್ನು ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಇಂಜಿನಿಯರಿಂಗ್​ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...