ನಿಯಮಿತವಾಗಿ ಪಪ್ಪಾಯಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯುತ್ತಿದ್ದರೆ, ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ.
* ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ಕ್ಷಿಪ್ರಗತಿಯಲ್ಲಿ ತೂಕ ಕಡಿಮೆಯಾಗುತ್ತದೆ.
* ಹಸಿ ಪಪ್ಪಾಯಿಯ ಸೇವನೆ ಬೊಜ್ಜಿನ ಸಮಸ್ಯೆಗೂ ರಾಮಬಾಣವಾಗಿದೆ.
* ಪಪ್ಪಾಯಿಯನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ ತುಂಬಾ ಒಳ್ಳೆಯದು. ಇದರಿಂದ ದೇಹದೊಳಗಿರುವ ವಿಷಕಾರಿ ಅಂಶ ಹೊರಗೆ ಹೋಗುತ್ತದೆ.
* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ಅಭ್ಯಾಸ ಮಾಡಿಕೊಂಡರೆ ಹೊಟ್ಟೆಯಲ್ಲಿರುವ ಹುಳು, ಕ್ರಿಮಿಕೀಟಗಳು ಸತ್ತು ಹೋಗುತ್ತವೆ.
* ಹೆಚ್ಚಿನವರು ಈ ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಅಂಥವರು ಪಪ್ಪಾಯಿಯ ಸ್ಮೂಥಿ ಮಾಡಿಕೊಂಡು ಕುಡಿಯಬಹುದು. ಇದು ಹಸಿವನ್ನು ನಿಯಂತ್ರಿಸುವುದಲ್ಲದೆ ದೇಹದಲ್ಲಿ ಹೆಚ್ಚುವರಿ ಕೊಬ್ಬು ಬೆಳೆಯದಂತೆ ತಡೆಗಟ್ಟುತ್ತದೆ.