ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು ಜನರು ಆನ್ಲೈನ್ ಮೋಸಕ್ಕೆ ಒಳಗಾಗಿದ್ದಾರೆ.
ಜನರ ವೈಯಕ್ತಿಕ ಮಾಹಿತಿಯನ್ನು ಪತ್ತೆ ಮಾಡುವ ವಂಚಕರು, ಜನರ ಖಾತೆಯಿಂದ ಆರಾಮವಾಗಿ ಹಣ ದೋಚುತ್ತಿದ್ದಾರೆ. ಕಳ್ಳತನದ ನಂತರ ಹಣ ಮರಳಿ ಪಡೆಯಲು ಯಾವುದೇ ಆಯ್ಕೆ ಇಲ್ಲ. ಇದು ಆನ್ಲೈನ್ ವಂಚಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಆನ್ಲೈನ್ ವಂಚನೆ ನಂತ್ರ ಪರಿತಪಿಸುವ ಬದಲು ಆನ್ಲೈನ್ ವಂಚನೆ ಆಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.
ಇದೇ ಮೊದಲ ಬಾರಿ ಇಲ್ಲಿ ಸಂಭವಿಸಿಲ್ಲ ಕೊರೊನಾದಿಂದ ಸಾವು….!
ಹ್ಯಾಕರ್ಸ್, ನಕಲಿ ವೆಬ್‌ಸೈಟ್‌ಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ವೆಬ್ಸೈಟ್ ಮೂಲಕ ವಂಚನೆಯಾದ್ರೆ ಆ ಹಣವನ್ನು ವಾಪಸ್ ಪಡೆಯಬಹುದು. ಮೋಸಕ್ಕೊಳಗಾದ ವ್ಯಕ್ತಿ, ತಕ್ಷಣ ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಬ್ಯಾಂಕ್ ಗೆ ನೀಡಬೇಕು. ತಕ್ಷಣ ಬ್ಯಾಂಕ್ ಗೆ ಸೂಚನೆ ನೀಡಿದ್ರೆ , ವಂಚನೆಯನ್ನು ತಪ್ಪಿಸಬಹುದು.
ಬ್ಯಾಂಕುಗಳು, ಗ್ರಾಹಕರಿಗೆ ಹಣಕಾಸು ವಂಚನೆ ವಿಮೆ ನೀಡುತ್ತವೆ. ಗ್ರಾಹಕರು ತಕ್ಷಣವೇ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಬ್ಯಾಂಕ್ ತಕ್ಷಣವೇ ವಿಮಾ ಕಂಪನಿಗೆ ವರದಿ ಮಾಡುತ್ತದೆ.
ಬ್ಯಾಂಕುಗಳು ಸಾಮಾನ್ಯವಾಗಿ 10 ವ್ಯವಹಾರ ದಿನಗಳಲ್ಲಿ ನಷ್ಟವನ್ನು ವಾಪಸ್ ನೀಡುತ್ತದೆ. ಅನಧಿಕೃತ ವಹಿವಾಟುಗಳನ್ನು ಸಾಮಾನ್ಯವಾಗಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಮರುಪಾವತಿ ಮಾಡುತ್ತವೆ. ಆದ್ರೆ ಗ್ರಾಹಕರು ವಂಚನೆಯಾದ ಮೂರು ದಿನಗಳಲ್ಲಿ ಬ್ಯಾಂಕಿಗೆ ಮಾಹಿತಿ ನೀಡಬೇಕು.