ಹಾಸನ : ನಕ್ಷತ್ರಗಳನ್ನು ಎಣಿಸಬಹುದೇನೋ, ಹಾಸನದ ಕಾಂಗ್ರೆಸ್ ಬೆಂಬಲಿಗರನ್ನು ಎಣಿಸೋದು ಅಸಾಧ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರೋಡ್ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಕ್ಷತ್ರಗಳನ್ನು ಎಣಿಸಬಹುದೇನೋ, ಹಾಸನದ ಕಾಂಗ್ರೆಸ್ ಬೆಂಬಲಿಗರನ್ನು ಎಣಿಸೋದು ಅಸಾಧ್ಯ . ಇಲ್ಲಿನ ಜನತೆ ನೀಡಿದ ಅಪಾರ ಬೆಂಬಲ, ಪ್ರೀತಿ, ಸಹಕಾರ ಕಾಂಗ್ರೆಸ್ ಗೆಲುವಿಗೆ ಮುನ್ನುಡಿ ಬರೆದಂತಿದೆ. ತಾಯಿ ಹಾಸನಾಂಬೆಯ ಕೃಪೆ ಇರಲಿ ಎಂದು ಶ್ರೇಯಸ್ ಪಟೇಲ್ ಅವರಿಗೆ ಶುಭ ಹಾರೈಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.