ಆಧುನಿಕ ಜೀವನ ಶೈಲಿ, ಆಹಾರ ಕ್ರಮಗಳು ಮೊದಲಾದ ಕಾರಣಗಳಿಂದ ಕಿರಿಯ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳುತ್ತದೆ.
ಕುಳಿತು ಮಾಡುವ ಕೆಲಸಗಳಿಂದ ದೇಹಕ್ಕೆ ಶ್ರಮವಿಲ್ಲದೇ ಬೊಜ್ಜು ಬರುತ್ತದೆ. ಕೆಲವರು ಬೊಜ್ಜು ಕರಗಿಸಲು ಎಷ್ಟೆಲ್ಲಾ ಶ್ರಮ ಹಾಕುತ್ತಾರೆ. ಆದರೆ, ಬೊಜ್ಜು ಕಡಿಮೆಯಾಗುವುದೇ ಇಲ್ಲ.
ಮಿತಿ ಮೀರಿದ ತೂಕ ಅಥವಾ ಬೊಜ್ಜು ಅಪಾಯಕ್ಕೆ ಆಹ್ವಾನ ನೀಡಿದಂತೆ. ಬೊಜ್ಜಿನಿಂದ ಹೆಚ್ಚು ದೂರ ನಡೆಯಲು ಆಗುವುದಿಲ್ಲ. ಬಿಸಿಲಾದರಂತೂ ಮುಗಿದೇ ಹೋಯ್ತು.
ಇನ್ನು ಭಾರ ಎತ್ತುವುದು, ಮೆಟ್ಟಿಲು ಹತ್ತುವುದು, ಕಠಿಣ ಶ್ರಮದ ಕೆಲಸಗಳನ್ನಂತೂ ಮಾಡಲು ಕಷ್ಟಪಡಬೇಕಾಗುತ್ತದೆ.
ಸಣ್ಣ ಕೆಲಸ ಮಾಡಿದರೂ ಆಯಾಸ ಜಾಸ್ತಿಯಾಗುತ್ತದೆ. ಮಿತಿ ಮೀರಿದ ತೂಕ ಹೊಂದಿದವರಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಪ್ರಮಾಣ ಇರುತ್ತದೆ. ಹೈ ಬಿ.ಪಿ. ಸಂಭವ ಹೆಚ್ಚಾಗಿರುತ್ತದೆ.
ಹೃದಯದ ಸುತ್ತ ಇರುವ ಮಾಂಸ ಖಂಡಗಳ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ, ಉಸಿರಾಟದ ತೊಂದರೆ ಕಾಣಿಸುತ್ತದೆ. ಹೃದಯಕ್ಕೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು.
ಬೊಜ್ಜು ಇರುವವರಲ್ಲಿ ಕೆಲವೊಮ್ಮೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಇನ್ನು ಮದುವೆಯಾಗದ ಯುವಕ, ಯುವತಿಯರು ದಢೂತಿಯಾಗಿದ್ದಲ್ಲಿ ಮದುವೆಯೂ ವಿಳಂಬವಾಗಬಹುದು. ಹಾಗಾಗಿ, ಬೊಜ್ಜು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ ಸರಳ ವ್ಯಾಯಾಮ, ನಿಯಮಿತ ಆಹಾರ ಕ್ರಮ ಅನುಸರಿಸಿ.