alex Certify ಮುಂಬೈ ವೇಗದ ಜೀವನಕ್ಕೆ ಕನ್ನಡಿಯಂತಿದೆ ಈ ವೈರಲ್ ದೃಶ್ಯ: 15 ಸೆಕೆಂಡ್ ಗಳಲ್ಲಿ 3 ಟಿಕೆಟ್ ನೀಡಿದ ನಿವೃತ್ತ ಉದ್ಯೋಗಿ ಹೈಸ್ಪೀಡ್ ಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈ ವೇಗದ ಜೀವನಕ್ಕೆ ಕನ್ನಡಿಯಂತಿದೆ ಈ ವೈರಲ್ ದೃಶ್ಯ: 15 ಸೆಕೆಂಡ್ ಗಳಲ್ಲಿ 3 ಟಿಕೆಟ್ ನೀಡಿದ ನಿವೃತ್ತ ಉದ್ಯೋಗಿ ಹೈಸ್ಪೀಡ್ ಗೆ ಅಚ್ಚರಿ

ಕೇವಲ 15 ಸೆಕೆಂಡ್ ಗಳಲ್ಲಿ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ಮೂರು ಟಿಕೆಟ್ ನೀಡಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈ ವೇಗದ ಜೀವನಕ್ಕೆ ಕನ್ನಡಿಯಂತಿರುವ ದೃಶ್ಯ ವಿಡಿಯೋದಲ್ಲಿದೆ. ರೈಲುಗಳಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕು. ಇದಕ್ಕಾಗಿ ಸಮಯ ವ್ಯರ್ಥ ಮಾಡಿಕೊಳ್ಳಬೇಕು. ಜೊತೆಗೆ ತಾಳ್ಮೆಯೂ ಇರಬೇಕು.

ಮುಂಬೈ ರೈಲು ನಿಲ್ದಾಣವೊಂದರಲ್ಲಿ ATVM (ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ) ಮೂಲಕ ವ್ಯಕ್ತಿಯೊಬ್ಬರು ಶರವೇಗದಲ್ಲಿ ಟಿಕೆಟ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. 15 ಸೆಕೆಂಡ್ ಗಳಲ್ಲಿ ನಿವೃತ್ತ ಉದ್ಯೋಗಿ ಮೂರು ಟಿಕೆಟ್ ನೀಡಿದ್ದಾರೆ. ಅವರು ಎಟಿವಿಎಂ ಮೂಲಕ ಟಿಕೆಟ್ ನೀಡುವ ವೇಗ ದಂಗಾಗಿಸುವಂತಿದೆ. ಟ್ವಿಟರ್ ನಲ್ಲಿ ಅನೇಕರು ವಿಡಿಯೋ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತೀಯ ರೈಲ್ವೇಯ ಈ ವ್ಯಕ್ತಿ 15 ಸೆಕೆಂಡ್‌ ಗಳಲ್ಲಿ 3 ಪ್ರಯಾಣಿಕರಿಗೆ ಟಿಕೆಟ್‌ ಗಳನ್ನು ನೀಡುತ್ತಿದ್ದಾರೆ ಎಂದು ಮುಂಬೈ ರೈಲ್ವೆ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಈ ATVM ಫೆಸಿಲಿಟೇಟರ್‌ ನಿಂದ ಟಿಕೆಟ್‌ಗಳನ್ನು ನೀಡುವ ವೇಗ ಅಚ್ಚರಿಯಂತಿದೆ ಎಂದು ಟ್ವೀಟಾರ್ಥಿಯೊಬ್ಬರು ಹೇಳಿದ್ದಾರೆ. Fastest fingers first class!!! #respect ಎಂದು ಮತ್ತೊಬ್ಬರು ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ.

ATVM ಫೆಸಿಲಿಟೇಟರ್‌ ನಿವೃತ್ತ ಉದ್ಯೋಗಿಗಳಾಗಿದ್ದು, ಪ್ರಯಾಣಿಕರು ATVM ಗಳ ಮೂಲಕ ವೇಗವಾಗಿ ಟಿಕೆಟ್‌ ಗಳನ್ನು ಪಡೆಯಲು ಸಹಾಯ ಮಾಡುತ್ತಾರೆ. ಅವರಿಗೆ ಟಿಕೆಟ್ ಮಾರಾಟದಲ್ಲಿ 3% ಕಮಿಷನ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...