ನಿಂಬೆ ಹಣ್ಣಿನ ಸಿಪ್ಪೆಯನ್ನು ಉಪಯೋಗವಿಲ್ಲ ಎಂದು ಎಸೆಯುತ್ತಾರೆ. ಆದರೆ ಇದು ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನಿಶಿಯಂ, ಮುಂತಾದ ಖನಿಜಗಳನ್ನು ಒಳಗೊಂಡಿರುವುದರಿಂದ ಇದರಿಂದ ಮಹಿಳೆಯರ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
*ಚರ್ಮವನ್ನು ಸ್ಕ್ರಬ್ ಮಾಡಲು ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಗೆ ಸಕ್ಕರೆ, ಜೇನುತುಪ್ಪ, ತೆಂಗಿನ ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದರಿಂದ ಸತ್ತ ಚರ್ಮ ಕೋಶ ನಿವಾರಣೆಯಾಗಿ ಚರ್ಮ ಹೊಳೆಯುತ್ತದೆ.
* ಬೇಸಿಗೆಯಲ್ಲಿ ಚರ್ಮ ಹೆಚ್ಚು ಎಣ್ಣೆಯುಕ್ತವಾಗುತ್ತಿದ್ದರೆ ಅದನ್ನು ನಿವಾರಿಸಲು 1 ಚಮಚ ನಿಂಬೆ ಸಿಪ್ಪೆ ಪುಡಿಗೆ, ರೋಸ್ ವಾಟರ್, ಮೊಸರು, 1 ಚಮಚ ಕಡಲೆಹಿಟ್ಟನ್ನು ಸೇರಿಸಿ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮ ಹೊಳಪು ಹೆಚ್ಚಾಗುತ್ತದೆ.