ಕೋಕಾ ಕೋಲಾ ವಿಚಾರದಲ್ಲಿ ರೊನಾಲ್ಡೋ ಹಾದಿ ತುಳಿದ ವಾರ್ನರ್..! ಟೇಬಲ್ ಮೇಲಿದ್ದ ಬಾಟಲಿ ತೆಗೆಸಿದ ಕ್ರಿಕೆಟಿಗ 29-10-2021 11:15AM IST / No Comments / Posted In: Latest News, Live News, Sports ಫುಟ್ಬಾಲ್ ಸೂಪರ್ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಮಾಧ್ಯಮ ಸಂದರ್ಶನದ ವೇಳೆ ಕೋಕಾ ಕೋಲಾ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ನಿಮಗೆ ನೆನಪಿದ್ದಿರಬಹುದು. ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡಿತ್ತು. ಇದಾದ ಬಳಿಕ ಮಾರುಕಟ್ಟೆಯಲ್ಲಿ ಕೋಕಾ ಕೋಲಾ ಷೇರು ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿತ್ತು. ಇಂತಹ ವರನನ್ನು ಎಲ್ಲಾದರೂ ನೋಡಿದ್ರಾ ನೀವು….! ಯುರೋ 2020 ಪಂದ್ಯಾವಳಿಯ ಸಮಯದಲ್ಲಿ ಮಾಧ್ಯಮ ಸಂದರ್ಶನದ ವೇಳೆ ಟೇಬಲ್ ಮೇಲೆ ಇರಿಸಲಾಗಿದ್ದ ಕೋಕಾ ಕೋಲಾ ಬಾಟಲಿಗಳನ್ನು ರೊನಾಲ್ಡೋ ಪಕ್ಕಕ್ಕೆ ಎತ್ತಿಟ್ಟಿದ್ದರು. ಈ ಘಟನೆಯನ್ನು ಈಗ ನೆನೆಪಿಸಿಕೊಳ್ಳುತ್ತಿರೋದ್ರ ಹಿಂದೆ ಒಂದು ಕಾರಣ ಕೂಡ ಇದೆ. 2021ರ ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಯ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಕ್ರಿಸ್ಟಿಯಾನೋ ಕೋಕಾ ಕೋಲಾ ಘಟನೆಯನ್ನು ಮರುಸೃಷ್ಟಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ವಾರ್ನರ್, ಕೋಕಾ ಕೋಲಾ ಬಾಟಲಿಗಳನ್ನು ಮೇಜಿನಿಂದ ತೆಗೆಸಿದ್ದಾರೆ. ಯುರೋ 2020ರಂತೆಯೇ 2021ರ ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಗೂ ಕೋಕಾ ಕೋಲಾ ಕಂಪನಿ ಸ್ಪಾನ್ಸರ್ ಆಗಿದೆ. ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯದ ಬಳಿಕ ನಡೆಯುವ ಸುದ್ದಿಗೋಷ್ಠಿಯಲ್ಲಿ ಆಟಗಾರರು ಆಸೀನರಾಗುವ ಖುರ್ಚಿಯ ಮುಂದೆ ಇಡಲಾಗುವ ಮೇಜಿನಲ್ಲಿ ಎರಡು ಕೋಕಾ ಕೋಲಾ ಬಾಟಲಿಯನ್ನು ಜಾಹಿರಾತಿಗೆಂದು ಇಡಲಾಗುತ್ತೆ. BIG BREAKING: ಒಂದೇ ದಿನ ಮತ್ತೆ 14,348 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಭಾರಿ ಏರಿಕೆ ಶ್ರೀಲಂಕಾ ವಿರುದ್ಧ ಗೆಲುವನ್ನು ದಾಖಲಿಸಿದ ಬಳಿಕ ವಾರ್ನರ್ ಪತ್ರಕರ್ತರ ಜೊತೆ ಮಾತನಾಡಲು ಆಗಮಿಸಿದ್ದರು. ಅಲ್ಲಿದ್ದ ಕೋಕ್ ಬಾಟಲಿಗಳನ್ನು ನೋಡಿದ ವಾರ್ನರ್ ಸಿಬ್ಬಂದಿಯ ಬಳಿ ನಾನು ಇದನ್ನು ತೆಗೆಯಬಹುದೇ..? ಎಂದು ಕೇಳಿದ್ದಾರೆ. ಬಳಿಕ ಇದು ಕ್ರಿಸ್ಟಿಯಾನೋಗೆ ಒಳ್ಳೆಯದು ಎಂದಾದರೆ ನನಗೂ ಕೂಡ ಒಳ್ಳೆಯದೇ ಎಂದು ಹೇಳಿದ್ದಾರೆ. ಐಸಿಸಿ ಜೊತೆಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಕೋಕಾ ಕೋಲಾ ಕಂಪನಿ ಕಳೆದ ವರ್ಷದ ಟಿ 20 ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿಯೂ ಬಹುದೊಡ್ಡ ಪಾಲನ್ನು ಹೊಂದಿತ್ತು. ಕ್ರಿಸ್ಟಿಯಾನೋ ಕೋಕ್ ಬಾಟಲಿಗಳನ್ನು ತೆಗೆದ ಬಳಿಕ ಪಂದ್ಯಗಳಲ್ಲಿ ಮತ್ತಷ್ಟು ಯಶಸ್ಸನ್ನು ಸಂಪಾದಿಸಿದ್ದರು. ಇದಾದ ಬಳಿಕ ಇದೊಂದು ಟ್ರೆಂಡ್ ಆಗಿ ಬದಲಾಗಿತ್ತು. ಯುರೋ 2020ಯಲ್ಲಿ ಕೋಕಾ ಕೋಲಾ ಬಹುದೊಡ್ಡ ಪಾಲುದಾರ ಸಂಸ್ಥೆಯಾಗಿದ್ದರಿಂದ ಇನ್ಯಾವುದೇ ಆಟಗಾರರಿಗೆ ಈ ಟ್ರೆಂಡ್ ಮುಂದುವರಿಸಲು ಸಾಧ್ಯವಾಗಿರಲಿಲ್ಲ. pic.twitter.com/wfInzxvKoq — Hassam (@Nasha_e_cricket) October 28, 2021