ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 22ರ ಭಾನುವಾರ ರಕ್ಷಾ ಬಂಧನ ಆಚರಿಸಲಾಗ್ತಿದೆ. ಈ ಬಾರಿ ರಾಖಿ ಹಬ್ಬವು ಅನೇಕ ಕಾರಣಗಳಿಗಾಗಿ ವಿಶೇಷವಾಗಿದೆ. ಭದ್ರನ ನೆರಳಿಲ್ಲದ ಕಾರಣ ಯಾವ ಸಮಯದಲ್ಲಿಯಾದ್ರೂ ಸಹೋದರನಿಗೆ ರಾಖಿ ಕಟ್ಟಬಹುದಾಗಿದೆ.
ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಸಹೋದರನ ಬಳಿ ಹೋಗಲು ಸಾಧ್ಯವಿಲ್ಲ. ಅನೇಕರು ಕೋರಿಯರ್ ಮೂಲಕ ರಾಖಿ ಕಳಿಸುತ್ತಿದ್ದಾರೆ. ಒಟ್ಟಿಗೆ ಇರುವ ಸಹೋದರ-ಸಹೋದರಿಯರು, ರಾಖಿ ಕಟ್ಟುವ ಮೊದಲು ಕೆಲವೊಂದು ನಿಯಮವನ್ನು ಪಾಲಿಸಬೇಕಾಗುತ್ತದೆ. ರಾಖಿ ಕಟ್ಟುವ ಮೊದಲು, ಸಹೋದರನ ಹಣೆಗೆ ತಿಲಕವಿಡಬೇಕು. ಕುಂಕುಮದ ತಿಲಕವಿಟ್ಟ ನಂತ್ರ ತಲೆಗೆ ಅಕ್ಷತೆ ಹಾಕಬೇಕು. ನಂತ್ರ ಆರತಿ ಬೆಳಗಿ, ಸಿಹಿ ತಿಂಡಿ ತಿನಿಸಿ, ನಂತ್ರ ರಾಖಿ ಕಟ್ಟಬೇಕು. ಸಹೋದರ ತನ್ನ ಸಾಮರ್ಥ್ಯಕ್ಕೆ ತಕ್ಕಷ್ಟು ಉಡುಗೊರೆಯನ್ನು ನೀಡುತ್ತಾನೆ.
ಕೆಲ ಸಂದರ್ಭದಲ್ಲಿ, ಸಣ್ಣ ಕಾರಣಕ್ಕೆ ಸಹೋದರ-ಸಹೋದರಿ ಮಧ್ಯೆ ಭಿನ್ನಾಭಿಪ್ರಾಯ ಬಂದಿರುತ್ತದೆ. ಸಹೋದರಿಯರು ಸಣ್ಣ ಉಪಾಯ ಮಾಡಿ, ಸಮಸ್ಯೆ ಬಗೆಹರಿಸಬಹುದು. ಕೆಂಪು ಬಟ್ಟೆ ಮೇಲೆ ಸಹೋದರನ ಫೋಟೋ ಇಡಬೇಕು. ಅದಕ್ಕೆ 125 ಗ್ರಾಂ ಕಡಲೆ ಕಾಳು, 21 ಬಿಳಿ ಮಿಠಾಯಿ, 21 ಹಸಿರು ಏಲಕ್ಕಿ, 21 ಒಣ ದ್ರಾಕ್ಷಿ, 5 ಕರ್ಪೂರ ಹಾಗೂ 11 ರೂಪಾಯಿ ಹಾಕಿ ಗಂಟು ಕಟ್ಟಿ. ಸಹೋದರನ ದೀರ್ಘಾಯುಷ್ಯಕ್ಕೆ ಪ್ರಾರ್ಥನೆ ಮಾಡುತ್ತ 11 ಬಾರಿ ಫೋಟೋವನ್ನು ಮೇಲೆ-ಕೆಳಗೆ ಮಾಡಿ. ನಂತ್ರ ಇದನ್ನು ಶಿವನ ದೇವಸ್ಥಾನದಲ್ಲಿ ಇಡಿ. ಹೀಗೆ ಮಾಡಿದ್ರೆ ಮುನಿಸಿಕೊಂಡ ಸಹೋದರ ಹತ್ತಿರ ಬರ್ತಾನೆ.