ನಮಗೆ ಬಿಕ್ಕಳಿಗೆ ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಜ್ಜಿ ಹೇಳ್ತಾ ಇದ್ರು. ಇದು ನಿಜಾನಾ? ಅಸಲಿಗೆ ಬಿಕ್ಕಳಿಕೆ ಬರೋದ್ಯಾಕೆ ಅನ್ನೋದಕ್ಕೆ ನಾವ್ ಉತ್ತರ ಹೇಳ್ತೀವಿ. ನಂಬಿಕೆಗಳ ಜೊತೆಗೆ ಈ ಹಿಚ್ಕಿ ಹಿಂದೆ ವೈಜ್ಞಾನಿಕ ಕಾರಣವೂ ಇದೆ.
ಸ್ನಾಯು ಹೊಟ್ಟೆಯಿಂದ ಎದೆಯ ಗೂಡನ್ನೂ ಬೇರ್ಪಡಿಸಿದಾಗ ಅದಕ್ಕೆ ಒಂದು ರೀತಿ ಡಿಸ್ಟರ್ಬ್ ಆಗಿ ಈ ರೀತಿ ಶಬ್ಧ ಮಾಡುತ್ತದೆ. ಕೇವಲ ಇದೊಂದೇ ಕಾರಣವಲ್ಲ, ಅತ್ಯಂತ ವೇಗವಾಗಿ ಏನನ್ನಾದ್ರೂ ತಿಂದ್ರೆ, ಕುಡಿದ್ರೆ, ಅತಿಯಾದ ಆಸಕ್ತಿ ಅಥವಾ ಥ್ರಿಲ್ ಇದ್ರೆ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಇದ್ದರೆ ಬಿಕ್ಕಳಿಕೆ ಬರುತ್ತದೆ.
ಪಾರ್ಶ್ವಶೂಲೆ, ನ್ಯುಮೋನಿಯಾ, ಹೊಟ್ಟೆ ಅಥವಾ ಅನ್ನನಾಳ ಸಮಸ್ಯೆ, ಮದ್ಯಪಾನ ಮತ್ತು ಹೆಪಟೈಟಿಸ್ ನಂತಹ ಅಸ್ವಸ್ಥತೆಯಿಂದ್ಲೂ ಬಿಕ್ಕಳಿಕೆ ಬರುವ ಸಾಧ್ಯತೆ ಇರುತ್ತದೆ. ಹಾಗಂತ ಬಿಕ್ಕಳಿಕೆ ಬಂದಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಒಂದು ಚಮಚ ಸಕ್ಕರೆ ಅಥವಾ ಜೇನುತುಪ್ಪ ತಿಂದು ನೀರು ಕುಡಿಯಿರಿ. ಇದರಿಂದ ನರಗಳ ಒತ್ತಡ ಕಡಿಮೆಯಾಗಿ ಸಡಿಲಗೊಳ್ಳುತ್ತವೆ. ಬಿಕ್ಕಳಿಕೆ ದೀರ್ಘ ಸಮಯದವರೆಗೂ ಇದ್ದಲ್ಲಿ, ಮನೆಮದ್ದಿನಿಂದ ಪರಿಹಾರವಾಗದೇ ಇದ್ದಲ್ಲಿ ವೈದ್ಯರನ್ನು ಭೇಟಿಯಾಗಿ.
ಇನ್ಮುಂದೆ ಬಿಕ್ಕಳಿಕೆ ಬಂದಾಕ್ಷಣ ಯಾರೋ ನನ್ನನ್ನು ನೆನೆಸಿಕೊಳ್ತಿದ್ದಾರೆ ಅಂತಾ ಅಂದುಕೊಳ್ಳಬೇಡಿ. ತಕ್ಷಣ ಸಕ್ಕರೆ ಮತ್ತು ನೀರು ಹುಡುಕಿಕೊಂಡು ಅಡುಗೆ ಮನೆಗೆ ಹೊರಡಿ.