ಮಂಡ್ಯ : ನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ನನಗೆ ಬಲ ಬರುತ್ತದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ ‘ಮಂಡ್ಯದಲ್ಲಿ 100 % ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆ. ನಟ ದರ್ಶನ್, ಯಶ್ ಚುನಾವಣಾ ಪ್ರಚಾರಕ್ಕೆ ಬಂದರೆ ನನಗೆ ಬಲ ಬರುತ್ತದೆ, ಅವರು ಪ್ರಚಾರಕ್ಕೆ ಬಂದರೆ ಸಂತೋಷ’ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ನನಗೋಸ್ಕರ ಅವರಿಬ್ಬರು ಬರೀ ಸಪೋರ್ಟ್ ಮಾಡಿಲ್ಲ, ತ್ಯಾಗ ಮಾಡಿದ್ದಾರೆ. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಎನ್ನುವುದು ಸರಿಯಲ್ಲ. ಇಬ್ಬರೂ ಒಂದೊಂದು ಸಿನಿಮಾ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಪ್ರಚಾರಕ್ಕೆ ಬಂದರೆ ಸ್ವಾಗತ ಎಂದರು. ಅವತ್ತಿನ ಸ್ಥಿತಿಯಲ್ಲಿ ನಟ ಯಶ್ ನನ್ನ ಜೊತೆ ನಿಂತಿದ್ದರು. ಅವರು ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂದರೆ ಸ್ವಾಗತ, ಬರದಿದ್ರೆ ಬೇಸರವಂತೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.