ಕಾಲಿಗೆ ಕಾಲ್ಗೆಜ್ಜೆ ಚೆಂದ. ಮಹಿಳೆಯ ಕಾಲಿನ ಸೌಂದರ್ಯವನ್ನು ಈ ಗೆಜ್ಜೆ ಹೆಚ್ಚಿಸುತ್ತೆ. ಮಾರುಕಟ್ಟೆಗೆ ತರಹೇವಾರು ಗೆಜ್ಜೆಗಳು ಲಗ್ಗೆ ಇಟ್ಟಿವೆ. ಸಾಮಾನ್ಯವಾಗಿ ಭಾರತೀಯ ಮಹಿಳೆ ಕಾಲ್ಗೆಜ್ಜೆ ಹಾಕ್ತಾಳೆ. ಹಿಂದಿನ ಕಾಲದವರ ಕಾಲಲ್ಲಿ ಕಾಲ್ಗೆಜ್ಜೆ ಇದ್ದೇ ಇರ್ತಾ ಇತ್ತು. ಕಾಲಿನ ಸೌಂದರ್ಯ ವೃದ್ಧಿಗೆ ಇದನ್ನು ಹಾಕ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಕಾಲ್ಗೆಜ್ಜೆ ಧರಿಸುವ ಹಿಂದೆ ಇನ್ನೂ ಅನೇಕ ಮಹತ್ವದ ಉದ್ದೇಶವಿದೆ.
ಮನೆಗೆ ಬರುವ ವಧುವಿಗೆ ಕಾಲ್ಗೆಜ್ಜೆ ತೊಡಿಸುವ ಪದ್ಧತಿ ಇದೆ. ಇದು ಕೇವಲ ಶೃಂಗಾರಕ್ಕೆ ಮಾತ್ರವಲ್ಲ. ಏಳ್ಗೆ ಹಾಗೂ ಸಂತೋಷವೂ ಇದರಲ್ಲಿ ಅಡಗಿದೆ. ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೂ ಮಹತ್ವವಿದೆ. ಕಾಲ್ಗೆಜ್ಜೆ ದೈವಿಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ. ಇದರಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರುತ್ತದೆಯಂತೆ.
ಕಾಲ್ಗೆಜ್ಜೆ ಶಬ್ದ ಕಾಲಿನ ಬಲವನ್ನು ಹೆಚ್ಚಿಸುತ್ತದೆ. ಅಲ್ಲದೆ ಕಾಲ್ಗೆಜ್ಜೆ ಶಬ್ದ ಮನೆಯನ್ನು ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಹಾಗೆ ಪರಿಸರವನ್ನು ಪವಿತ್ರವಾಗಿಟ್ಟಿರುತ್ತದೆ. ಬಂಗಾರ ಹಾಗೂ ಬೆಳ್ಳಿಯಿಂದ ಕಾಲ್ಗೆಜ್ಜೆಯನ್ನು ಮಾಡಲಾಗಿರುತ್ತದೆ. ಬಂಗಾರ ಅಥವಾ ಬೆಳ್ಳಿ ಲೋಹ ಶರೀರಕ್ಕೆ ಒಳ್ಳೆಯದು. ಅನೇಕ ಖಾಯಿಲೆಗಳನ್ನು ತಡೆಯುವ ಶಕ್ತಿ ಈ ಲೋಹಕ್ಕಿದೆ.