ಹಾವು ಮನುಷ್ಯನಿಗೆ ಕಚ್ಚಿದ್ರೆ ಮನುಷ್ಯ ಬದುಕುಳಿಯೋದು ಕಷ್ಟ. ವಿಷಕಾರಿ ಹಾವು ಕಚ್ಚಿದ ನಂತ್ರ ಸೂಕ್ತ ಚಿಕಿತ್ಸೆ ಸಿಗದೆ ಹೋದ್ರೆ ಕೆಲವೇ ಗಂಟೆಯಲ್ಲಿ ಮನುಷ್ಯ ಸಾವನ್ನಪ್ಪುತ್ತಾನೆ. ವಿಷಕಾರಿ ಹಾವು ಇನ್ನೊಂದು ವಿಷಕಾರಿ ಹಾವಿಗೆ ಕಚ್ಚಿದ್ರೆ ಅದರ ಪರಿಣಾಮ ಹೇಗಿರುತ್ತದೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ತಜ್ಞರ ಪ್ರಕಾರ, ವಿಷಕಾರಿ ಹಾಗೂ ವಿಷಕಾರಿ ಹಾವಿಗೆ ಕಚ್ಚಿದ್ರೆ ಅದು ಕೂಡ ಅಪಾಯಕಾರಿಯೆ.
ಒಂದೇ ಜಾತಿಯ ಹಾವು ಪರಸ್ಪರ ಕಚ್ಚಾಡಿಕೊಳ್ಳೋದು ಮಾಮೂಲಿ. ನಾಗರ ಹಾವು, ನಾಗರ ಹಾವನ್ನು ಕಚ್ಚಿದ್ರೆ ಯಾವುದೇ ಪರಿಣಾಮವಾಗುವುದಿಲ್ಲ. ಹಾವಿಗೆ ವಿಷ ಏರುವುದಿಲ್ಲ. ಹಾವಿನ ರಕ್ತದಲ್ಲಿ ಪ್ರತಿಕಾಯಗಳನ್ನು ಪರಿಚಲನೆ ಮಾಡುತ್ತವೆ. ತಮ್ಮ ಜಾತಿಯ ಹಾವಿನ ವಿಷ ಅವುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅದೇ ಬೇರೆ ಜಾತಿಯ ಹಾವಿಗೆ ನಾಗರಹಾವು ಕಚ್ಚಿದಾಗ ಎರಡಕ್ಕೂ ಪರಸ್ಪರರ ವಿಷ ನಾಟುತ್ತದೆ. ಒಂದು ಹಾವು ಬೇಗ ಸಾವನ್ನಪ್ಪಿದ್ರೆ ಇನ್ನೊಂದು ಹಾವು ಸ್ವಲ್ಪ ತಡವಾಗಿ ಸಾವನ್ನಪ್ಪುತ್ತದೆ. ಒಟ್ಟಿನಲ್ಲಿ ಎರಡೂ ಹಾವಿಗೆ ಸಾವು ನಿಶ್ಚಿತ ಎನ್ನುತ್ತಾರೆ ತಜ್ಞರು.
ನಾಗರ ಹಾವು ಬೇರೆ, ಕಿಂಗ್ ಕೋಬ್ರಾ ಬೇರೆ. ಈ ಎರಡು ಕಾದಾಟ ನಡೆಸಿದರೆ ಸೋಲು ನಾಗರಹಾವಿಗೆ ಆಗುತ್ತದೆ. ಅಲ್ಲದೆ ನಾಗರ ಹಾವು ಬೇಗ ಸಾವನ್ನಪ್ಪುತ್ತದೆ.
ಹಾವುಗಳು ವಿಷವನ್ನು ಹೊಂದಿರುವುದಲ್ಲದೆ ವಿಷವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ವಿಷವನ್ನು ಒಡೆಯುವ ರಾಸಾಯನಿಕವನ್ನು ಅವು ಉತ್ಪತ್ತಿ ಮಾಡುತ್ತವೆ. ನೀವು ಒಂದು ವಿಷಯುಕ್ತ ಹಾವು ಕಚ್ಚಿದ ಇಲಿಯನ್ನು ಇನ್ನೊಂದು ಹಾವಿಗೆ ತಿನ್ನಲು ನೀಡಿದ್ರೆ ಇಲಿ ತಿಂದ ಹಾವು ಸಾವನ್ನಪ್ಪುವುದಿಲ್ಲ ಎನ್ನುತ್ತಾರೆ ತಜ್ಞರು.