ಗರ್ಭಿಣಿಯರು ಯಾವಾಗ್ಲೂ ಬೆಚ್ಚಗಿರಬೇಕು ಅಂತಾ ಹಿರಿಯರು ಹೇಳೋದುಂಟು. ಆದ್ರೆ ಅದನ್ನು ಅಲಕ್ಷಿಸುವವರೇ ಹೆಚ್ಚು. ಅಧ್ಯಯನ ವರದಿಯೊಂದು ಹಿರಿಯರ ಕಿವಿ ಮಾತನ್ನು ಪುಷ್ಠೀಕರಿಸುತ್ತದೆ. ಗರ್ಭಿಣಿಯರು ಆ ಮಾತನ್ನು ತಪ್ಪದೇ ಪಾಲಿಸಬೇಕು ಎನ್ನುತ್ತಿದೆ ಈ ಸಂಶೋಧನೆ.
ಸಂಶೋಧಕರ ಪ್ರಕಾರ ಗರ್ಭಿಣಿ ಬ್ಯಾಕ್ಟೀರಿಯಾ, ವೈರಸ್ ಅಟ್ಯಾಕ್ ನಿಂದ ಬಳಲಿದ್ರೆ ಅದರ ಪರಿಣಾಮ ಹೊಟ್ಟೆಯಲ್ಲಿರೋ ಮಗುವಿನ ಮೇಲೂ ಆಗುತ್ತದೆ. ಸಾಮಾನ್ಯವಾಗಿ ಕಾಡುವ ಶೀತದ ವೈರಸ್ ಭ್ರೂಣದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಜನನಕ್ಕೂ ಮೊದಲೇ ಮಗುವಿನಲ್ಲಿ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುವ ಅಪಾಯವಿರುತ್ತದೆ.
ಇದರಿಂದ ಮಕ್ಕಳಿಗೆ ಬಾಲ್ಯದಲ್ಲೇ ಅಸ್ತಮಾ ಸಮಸ್ಯೆ ಕೂಡ ಶುರುವಾಗಬಹುದು. ಹಾಗಾಗಿ ಮಹಿಳೆಯರು ನೆಗಡಿಯಾಗದಂತೆ ಎಚ್ಚರ ವಹಿಸುವುದು ಉತ್ತಮ. ಹೋಟೆಲ್ ಗಳಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ನೀರು ಕುಡಿಯದಂತೆ ವೈದ್ಯರು ಸಲಹೆ ನೀಡುತ್ತಾರೆ. ಯಾಕಂದ್ರೆ ಶೀತದ ವೈರಸ್ ಗಳು ನೀರಿನ ಮೂಲಕವೂ ಹರಡುತ್ತವೆ.