
ಪಾಲಕ್ಕಾಡ್: ಕೇರಳದಲ್ಲಿ ಓಣಂ ಪ್ರಯುತ್ಕತ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿಯ ತುಂಡೊಂದು ಗಂಟಲಲ್ಲಿ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಆಲಮರಂನಲ್ಲಿ ಘಟನೆ ನಡೆದಿದೆ. ಆಲಮರಂನ ಕೊಲ್ಲಾಪುರ ನಿವಾಸಿ ಟಿಪ್ಪರ್ ಲಾರಿ ಚಾಲಕ ಸುರೇಶ್(50) ಮೃತಪಟ್ಟವರು. ಶನಿವಾರ ಮಧ್ಯಾಹ್ನ ಪಾಲಕ್ಕಾಡ್ ನ ಕಂಚಿಕ್ಕೋಡ್ ಸಮೀಪದ ಆಲಮರಂನಲ್ಲಿ ಸ್ಥಳೀಯರು ಓಣಂ ಆಚರಣೆಯ ವೇಳೆ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುರೇಶ್ ಗಂಟಲಲ್ಲಿ ಇಡ್ಲಿಯ ಚೂರು ಸಿಲುಕಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ವಾಳಯಾರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.