alex Certify ಅವಳಿ ಸಹೋದರಿಯರಿಗೆ ಅವಳಿ ಸಹೋದರರ ಮೇಲೆ ಪ್ರೀತಿ: ಕುತೂಹಲಕಾರಿಯಾಗಿದೆ ಈ ʼಪ್ರೇಮ್‌ ಕಹಾನಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಸಹೋದರಿಯರಿಗೆ ಅವಳಿ ಸಹೋದರರ ಮೇಲೆ ಪ್ರೀತಿ: ಕುತೂಹಲಕಾರಿಯಾಗಿದೆ ಈ ʼಪ್ರೇಮ್‌ ಕಹಾನಿʼ

ಅವಳಿ ಜವಳಿ ಮಕ್ಕಳು ಅಂದರೆ ನೋಡೋಕೆ ಒಂದೇ ತರ ಕಾಣ್ತಾರೆ ಅನ್ನೋದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ತದ್ರೂಪಿ ಅವಳಿ ಸಹೋದರಿಯರು ತದ್ರೂಪಿ ಅವಳಿ ಸಹೋದರರ ಜೊತೆ ಪ್ರೇಮ ಸಂಬಂಧ ಹೊಂದಿದ್ದಾರೆ. ಈ ತದ್ರೂಪಿ ಜೋಡಿ ಇದೀಗ ಲಿವಿಂಗ್​ ಟುಗೆದರ್​ ಜೀವನ ನಡೆಸುತ್ತಿದೆ.

25 ವರ್ಷದ ವೆನೆಸ್ಸಾ ಹಾಗೂ ಕೆರಿಸ್ಸಾ ಬಾಲ್ಯದಿಂದಲೂ ಯಾವುದೇ ಕೆಲಸ ಮಾಡೋದಾದರೂ ಸಹ ಒಟ್ಟಾಗಿಯೇ ಮಾಡುತ್ತಿದ್ದರು. ಇದೀಗ ಈ ಅಭ್ಯಾಸ ಅವರ ಲವ್​ ಜೀವನಕ್ಕೂ ಅನ್ವಯವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಈ ವಿಚಾರವಾಗಿ ಮಾತನಾಡಿದ ವೆನೆಸ್ಸಾ, ನಾನು ಹಾಗೂ ನನ್ನ ಸಹೋದರಿ ಸ್ನೇಹಿತೆಯರಂತೆ ಬದುಕಿದ್ದೇವೆ. ನಮ್ಮಿಬ್ಬರ ನಡುವೆ ಬಾಂಧವ್ಯ ಅಷ್ಟು ಬಲಿಷ್ಠವಾಗಿದೆ. ಆದರೆ ನಾವು ಅವಳಿ ಸಹೋದರರನ್ನೇ ಪ್ರೀತಿ ಮಾಡುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ಅವಳಿ ಸಹೋದರಿಯರು ಕಳೆದ ವರ್ಷ ಜೂನ್ ತಿಂಗಳಲ್ಲಿ ಅಮೆರಿಕದ ಮೆಡ್​ಫೋರ್ಡ್ ಎಂಬಲ್ಲಿ 29 ವರ್ಷದ ಜ್ಯಾಕೋಬ್​ ಹಾಗೂ ಲುಕಾಸ್​ರನ್ನ ಮೊದಲ ಬಾರಿಗೆ ಭೇಟಿ ಆಗಿದ್ದರು. ಪರ್ಸನಲ್​ ಟ್ರೇನರ್​ ಆಗಿರುವ ವೆನೆಸ್ಸಾಗೆ ಈ ಅವಳಿ ಸಹೋದರರ ಬಗ್ಗೆ ನರ್ಸ್​ ಒಬ್ಬರು ಮಾಹಿತಿ ನೀಡಿದ್ದರು. ನರ್ಸ್ ಈ ಅವಳಿ ಜೋಡಿ ನಿಜಕ್ಕೂ ಪರ್ಫೆಕ್ಟ್​ ಆಗಿರಲಿದೆ ಎಂದು ಊಹಿಸಿದ್ದರಂತೆ.

ವೆನೆಸ್ಸಾ ಲುಕಾಸ್​​ಗೆ ತಮ್ಮ ಮೊಬೈಲ್​ ನಂಬರ್​ ನೀಡಲು ನರ್ಸ್​ಗೆ ಒಪ್ಪಿಗೆ ನೀಡಿದ್ದರು. ಇದಾದ ಬಳಿಕ ನರ್ಸ್​ ವೆನೆಸ್ಸಾ ಬಳಿ ಲುಕಾಸ್​ ಕೂಡ ಅವಳಿ ಸಹೋದರನನ್ನ ಹೊಂದಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ಆ ಅವಳಿ ಸಹೋದರ ಕೆರಿಸ್ಸಾಗೆ ಒಳ್ಳೆಯ ಜೋಡಿ ಆಗಬಹುದು ಎಂದೂ ಹೇಳಿದ್ದರಂತೆ.

ಇದಾದ ಬಳಿಕ ಇವರು ಮೊದಲ ಬಾರಿಗೆ ಡೇಟ್​ ಮಾಡಿದ್ದಾರೆ. ಹಾಗೂ ಮೊದಲ ಭೇಟಿಯಲ್ಲೇ ಪ್ರೀತಿ ಎಂಬಂತೆ ಈ ಅವಳಿ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...