ಆಧಾರ್ ಸಂಖ್ಯೆ ಮಾದರಿಯಲ್ಲಿಯೇ ಪ್ರತಿ ಕುಟುಂಬಕ್ಕೆ ಒಂದು ಐಡಿ ನಂಬರ್ ನೀಡಲಿದ್ದು, ಇದರಿಂದ ಸರ್ಕಾರದ ಸೇವೆ, ಸೌಲಭ್ಯ ಪಡೆಯಬಹುದಾಗಿದೆ.
ಇ -ಆಡಳಿತ ಕೇಂದ್ರ ಕುಟುಂಬಕ್ಕೆ ಒಂದು ಐಡಿ ನಂಬರ್ ನೀಡಲು ಮುಂದಾಗಿದೆ. ರಾಜ್ಯದ ಜನರಿಗೆ ಐಡಿ ಸಂಖ್ಯೆ ಒದಗಿಸಲಿದ್ದು, ಇದರಿಂದ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬಹುದು. ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿಲ್ಲ. ಇದೊಂದು ನಂಬರ್ ಮೂಲಕ ಸೌಲಭ್ಯ ಪಡೆಯಬಹುದಾಗಿದೆ.
ಈಗಾಗಲೇ ಪಡಿತರ ಚೀಟಿ ಹೊಂದಿದವರಿಗೆ ಕುಟುಂಬದ ಗುರುತಿನ ಸಂಖ್ಯೆ ನೀಡಲಾಗಿದೆ. ಪಡಿತರ ಚೀಟಿ ಇಲ್ಲದವರಿಗೂ ಕೂಡ ಕುಟುಂಬದ ಐಡಿ ನಂಬರ್ ಮಾಡಿಕೊಡಲಾಗುವುದು.
ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ, ವಸತಿ ಸೌಲಭ್ಯ, ವಿದ್ಯಾರ್ಥಿ ವೇತನ, ಕೃಷಿ ಸೌಲಭ್ಯ, ವಾಹನ ನೋಂದಣಿ, ವಾಹನ ಚಾಲನಾ ಪರವಾನಿಗೆ ಮೊದಲಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. www.kutumba.karnataka.gov.in ವೆಬ್ಸೈಟ್ ನಲ್ಲಿ ಮಾಹಿತಿ ಅಪ್ಲೋಡ್ ಮಾಡಿ ಕುಟುಂಬ ಸದಸ್ಯರ ವಿವರ ನೀಡಿ ಐಡಿ ಪಡೆಯಬಹುದು. ಎಲ್ಲಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಉಚಿತ ಸೇವೆ ಇರುತ್ತದೆ ಎಂದು ಹೇಳಲಾಗಿದೆ.