ಬೆಂಗಳೂರು: ಐಸಿಎಸ್ಇ 10ನೇ ತರಗತಿ ಮತ್ತು 12ನೇ ತರಗತಿ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಹತ್ತನೇ ತರಗತಿಯಲ್ಲಿ ಬೆಂಗಳೂರಿನ ಹೆಬ್ಬಾಳದ ವಿದ್ಯಾನಿಕೇತನ ಶಾಲೆಯ ಅನನ್ಯಾ ಕಾರ್ತಿಕ್ ರಾಷ್ಟ್ರೀಯ ಮಟ್ಟದ ಟಾಪರ್ ಆಗಿ ಹೊರಹೊಮ್ಮಿದ್ದಾರೆ
ರಾಷ್ಟ್ರೀಯ ಮಟ್ಟದ ಟಾಪರ್ ಗಳ ಪಟ್ಟಿಯಲ್ಲಿ ಅನನ್ಯಾ ಒಬ್ಬರಾಗಿದ್ದು, ಶೇಕಡ 99.8ರಷ್ಟು 499 ಅಂಕ ಪಡೆದುಕೊಂಡಿದ್ದಾರೆ. ಉಳಿದ 9 ವಿದ್ಯಾರ್ಥಿಗಳು ಇಷ್ಟೇ ಅಂಕ ಪಡೆಯುವ ಮೂಲಕ ಮೊದಲ ರ್ಯಾಂಕ್ ಹಂಚಿಕೊಂಡಿದ್ದಾರೆ.
10ನೇ ತರಗತಿಯಲ್ಲಿ ವರ್ತೂರಿನ ವಿಬ್ ಗಯಾರ್ ಶಾಲೆಯ ಅಕ್ಷಯ, ಗ್ರೀನ್ ವುಡ್ ಹೈ ಶಾಲೆಯ ಆನಂದಿ ಸಾಹ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಇವರು ಶೇಕಡ 99.60 ಅಂಕ ಪಡೆದುಕೊಂಡಿದ್ದಾರೆ.
23 ವಿದ್ಯಾರ್ಥಿಗಳು ಶೇ. 99.40 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.
12ನೇ ತರಗತಿಯಲ್ಲಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಶೇಕಡ 99.25 ಅಂಕ ಪಡೆದುಕೊಂಡಿದ್ದಾರೆ. ಮಲ್ಯ ಅದಿತಿ ಇಂಟರ್ನ್ಯಾಷನಲ್ ಶಾಲೆಯ ಆನಂದಿತ ಡೇವಿಡ್, ಗ್ರೀನ್ ವುಡ್ ಹೈ ಶಾಲೆಯ ಸೆಬಂತಿ ಹುಯಿ, ಕ್ರೈಸ್ಟ್ ಅಕಾಡೆಮಿಯ ಸಾಯಿ ಅಕ್ಷಯ ರಾಜ್ಯದ ಟಾಪರ್ ಗಳಾಗಿದ್ದಾರೆ.