ನವದೆಹಲಿ: ಐಸಿಎಸ್‌ಇ ಮತ್ತು ಐ.ಎಸ್.ಸಿ. ಫಲಿತಾಂಶ -2021 ಇಂದು ಪ್ರಕಟವಾಗಿದೆ. ಕೌನ್ಸಿಲ್ ಆಫ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಸಿಐಎಸ್ಇ)ನಿಂದ ಐಸಿಎಸ್ಇ (10 ನೇ ತರಗತಿ) ಮತ್ತು ಐ.ಎಸ್.ಸಿ. (12 ನೇ ತರಗತಿ) ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿತ್ತು.
CISCE ಫಲಿತಾಂಶ -2021 ನೇರ ಲಿಂಕ್ ಕೌನ್ಸಿಲ್ ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಐಸಿಎಸ್‌ಇ ಮತ್ತು ಐಎಸ್‌ಸಿ ವಿದ್ಯಾರ್ಥಿಗಳು ಕೌನ್ಸಿಲ್‌ನ ಅಧಿಕೃತ ವೆಬ್‌ಸೈಟ್ cisce.org, ಮತ್ತು results.cisce.org ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ.
ಈ ವರ್ಷ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಐಸಿಎಸ್ಇ ಮತ್ತು ಐ.ಎಸ್.ಸಿ. ಪರೀಕ್ಷೆಗಳನ್ನು ರದ್ದುಪಡಿಸಲಾಗಿತ್ತು. ಆದರೆ, ಕೌನ್ಸಿಲ್ 10 ನೇ ತರಗತಿ, 12 ಫಲಿತಾಂಶಗಳನ್ನು ತಯಾರಿಸಲು ಮೌಲ್ಯಮಾಪನ ಮಾನದಂಡಗಳನ್ನು ರೂಪಿಸಿತ್ತು.
ವಿದ್ಯಾರ್ಥಿಗಳು ತಮ್ಮ 10 ನೇ, 12 ನೇ ತರಗತಿ ಫಲಿತಾಂಶವನ್ನು ಎಸ್‌ಎಂಎಸ್ ಮೂಲಕವೂ ಪಡೆಯಬಹುದು. ಎಸ್‌ಎಂಎಸ್‌ನಲ್ಲಿ ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶಗಳನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ಐಡಿಯನ್ನು 09248082883 ಗೆ ಕಳುಹಿಸಬೇಕಾಗುತ್ತದೆ. ಐಸಿಎಸ್‌ಇ / ಐ.ಎಸ್.ಸಿ.(ವಿಶಿಷ್ಟ ಐಡಿ). ಸಿಐಎಸ್ಇ ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಶೀಟ್ ಮತ್ತು ಪಾಸ್ ಪ್ರಮಾಣಪತ್ರ ನೀಡಲಿದೆ ಎನ್ನಲಾಗಿದೆ.