
ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವದ ಅನೇಕ ಕಡೆಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ.
ಅಮೆರಿಕದ ನ್ಯೂಯಾರ್ಕ್ ನ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಡಿಜಿಟಲ್ ರೂಪದಲ್ಲಿ ಪ್ರದರ್ಶಿಸಲಾಗಿದೆ. ಭಾರತೀಯ ಸ್ವಾತಂತ್ರ್ಯ ದಿನದಂದು ಅನಿಮೇಟೆಡ್ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಗಿದೆ.
ನ್ಯೂಯಾರ್ಕ್ 200 ವೆಸ್ಟ್ ಸ್ಟ್ರೀಟ್ ಲು ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಭಾರತದ ಸ್ವಾತಂತ್ರ್ಯದ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲಾಗಿದೆ. ಒನ್ ವರ್ಲ್ಡ್ ಟ್ರೇಡ್ ಸೆಂಟರ್ ವೇದಿಕೆಯಲ್ಲಿ ಅನಿಮೇಟೆಡ್ ಭಾರತೀಯ ಧ್ವಜವನ್ನು ಕಟ್ಟಡದ ಮೇಲ್ಭಾಗದಲ್ಲಿ ತ್ರಿವರ್ಣದಲ್ಲಿ ಬೆಳಗಿಸಲಾಗಿದೆ.
75 ನೇ ಸ್ವಾತಂತ್ರ್ಯದ ವರ್ಷವನ್ನು ನೆನಪಿಸಿಕೊಳ್ಳುತ್ತಿರುವ ಭಾರತವನ್ನು ಗೌರವಿಸಲಾಗಿದೆ. ನ್ಯೂಯಾರ್ಕ್ ನ ಮಿಡ್ ಟೌನ್ ನಲ್ಲಿರುವ ಒನ್ ಬ್ರ್ಯಾಂಟ್ ಪಾರ್ಕ್ ಮತ್ತು ಒನ್ ಫೈವ್ ಒನ್ ನಲ್ಲಿ ತ್ರಿವರ್ಣದಲ್ಲಿ ತಿರಂಗಾ ಬೆಳಗಿಸಲಾಗಿದೆ.