ನವದೆಹಲಿ: ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಭಾಗವಾಗಿದ್ದ 1971ರ ಹುತಾತ್ಮ ಸೈನಿಕರ ಸಂಕೇತ ಐಕಾನಿಕ್ ಇನ್‌ವರ್ಟೆಡ್ ರೈಫಲ್ ಮತ್ತು ಸೈನಿಕರ ಯುದ್ಧ ಹೆಲ್ಮೆಟ್ ಶುಕ್ರವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸ್ಥಳಾಂತರವಾಗಿದೆ.
“ಈ ಸ್ಥಳಾಂತರ ಕಾರ್ಯದೊಂದಿಗೆ, 1971ರ ಯುದ್ಧದ ಹುತಾತ್ಮ ಯೋಧರ ಸ್ಮಾರಕವನ್ನು ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ಏಕೀಕರಣಗೊಳಿಸಲಾಗಿದೆ” ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥರು ಅಧ್ಯಕ್ಷರು, ಚೀಫ್ಸ್ ಆಫ್ ಸ್ಟಾಫ್ ಕಮಿಟಿ (CISC) ಏರ್ ಮಾರ್ಷಲ್ ಬಿ ಆರ್ ಕೃಷ್ಣ ಮತ್ತು ಮೂರು ಸೇವೆಗಳ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಸಮಾರಂಭ ಸಂಪನ್ನಗೊಂಡಿದೆ.
BIG NEWS: ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು
ಸ್ಥಳಾಂತರಕ್ಕೆ ಮುನ್ನ ಹುತಾತ್ಮ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಲಾಯಿತು ಮತ್ತು ಇಂಡಿಯಾ ಗೇಟ್‌ನಲ್ಲಿ ಚೀಫ್ಸ್ ಆಫ್ ಸ್ಟಾಫ್ ಕಮಿಟಿ ಹೂಗುಚ್ಛವನ್ನು ಅರ್ಪಿಸಿದರು. ಅದರ ನಂತರ, ತಲೆಕೆಳಗಾದ ರೈಫಲ್ ಮತ್ತು ಹೆಲ್ಮೆಟ್ ಅನ್ನು ಅಲ್ಲಿಂದ ತೆಗೆದು ವಿಧ್ಯುಕ್ತ ವಾಹನದಲ್ಲಿ ಪರಮ ಯೋಧ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಹೊಸದಾಗಿ ರಚಿಸಲಾದ ಸ್ಮಾರಕದಲ್ಲಿ ಸ್ಥಾಪಿಸಲಾಯಿತು. ಮೂರು ಸೇವೆಗಳ ಎಜಿಗಳಿಗೆ ಸಮಾನರಾದ ಸಿಐಎಸ್‌ಸಿ ಹೊಸ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿದರು.
ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು ಜನವರಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ವಾಲೆಯೊಂದಿಗೆ ವಿಲೀನಗೊಳಿಸಲಾಗಿತ್ತು. ಸ್ಮಾರಕವು ಇಂಡಿಯಾ ಗೇಟ್‌ನಿಂದ 400 ಮೀಟರ್ ದೂರದಲ್ಲಿದೆ.
ಅಮರ್ ಜವಾನ್ ಜ್ಯೋತಿಯನ್ನು 1971 ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ನಿರ್ಮಿಸಲಾಯಿತು. ಈ ಸಮರದಲ್ಲಿ ಭಾರತವು ಗೆಲುವು ಕಂಡಿತ್ತು.
ಬಾಂಗ್ಲಾದೇಶದ ರಚನೆಗೂ ಈ ಸಮರ ಕಾರಣವಾಯಿತು. 1972ರ ಜನವರಿ 26 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಇದನ್ನು ಉದ್ಘಾಟಿಸಿದ್ದರು.