ನವದೆಹಲಿ: ಕೋವಿಡ್ ನಂತರದಲ್ಲಿ ಯುವಕರ (18ರಿಂದ 45 ವರ್ಷದೊಳಗಿನ) ಹಠಾತ್ ಸಾವಿನ ಕಾರಣವನ್ನು ಐಸಿಎಂಆರ್ ಅಧ್ಯಯನ ಮಾಡುತ್ತಿದೆ ಎಂದು ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಕೋವಿಡ್ ನಂತರದ ಜಗತ್ತಿನಲ್ಲಿ ಯುವಕರ ಹಠಾತ್ ಸಾವುಗಳಿಗೆ ಕಾರಣವನ್ನು ಅರ್ಥಮಾಡಿಕೊಳ್ಳಲು ಎರಡು ಮಹತ್ವದ ಅಧ್ಯಯನಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಐಸಿಎಂಆರ್‌ನ ಮಹಾನಿರ್ದೇಶಕರಾದ ಡಾ. ರಾಜೀವ್ ಬಹ್ಲ್, 18 ರಿಂದ 45 ವರ್ಷದೊಳಗಿನ ಯುವಕರ ಹಠಾತ್ ಸಾವಿನ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಯಾವುದೇ ಕಾರಣಗಳಿಲ್ಲದೆ ಹಠಾತ್ ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಈ ಅಧ್ಯಯನಗಳು ಕೋವಿಡ್-19ರ ನಂತರದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ರು.
ಸಂಶೋಧನಾ ಸಂಸ್ಥೆಯು ಇಲ್ಲಿಯವರೆಗೆ, ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ 50 ಶವಪರೀಕ್ಷೆಗಳನ್ನು ಅಧ್ಯಯನ ಮಾಡಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಇನ್ನೂ 100 ಗುರಿಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಶವಪರೀಕ್ಷೆಗಳ ಫಲಿತಾಂಶಗಳನ್ನು ಹಿಂದಿನ ವರ್ಷಗಳು ಅಥವಾ ಕೋವಿಡ್ ಪೂರ್ವ ವರ್ಷಗಳಲ್ಲಿ ಹೋಲಿಸಿದಾಗ ನಾವು ಕಾರಣಗಳು ಅಥವಾ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಡಾ. ಬಹ್ಲ್ ಹೇಳಿದ್ರು.
ಕೋವಿಡ್ ನಂತರದ ಜಗತ್ತಿನಲ್ಲಿ ಯುವಕರಲ್ಲಿ ಹಠಾತ್ ಸಾವು ಮಾನವ ದೇಹದೊಳಗೆ ಯಾವುದೇ ಶಾರೀರಿಕ ಬದಲಾವಣೆಗಳಿವೆಯೇ ಎಂದು ಅರ್ಥಮಾಡಿಕೊಳ್ಳಲು ಐಸಿಎಂಆರ್ ಪ್ರಯತ್ನಿಸುತ್ತಿದೆ. ಅಲ್ಲದೆ, ಸಾವಿನ ಹಿಂದಿನ ಸಂಭವನೀಯ ಕಾರಣಗಳನ್ನು ತಿಳಿದುಕೊಳ್ಳಲು ನಾವು ಮೃತರ ಕುಟುಂಬಗಳನ್ನು ಸಂದರ್ಶಿಸುತ್ತಿದ್ದೇವೆ ಎಂದು ಡಾ. ಬಹ್ಲ್ ತಿಳಿಸಿದ್ರು.