ʼಕೊರೊನಾʼ ಲಸಿಕೆ ಪರಿಣಾಮಕಾರತ್ವದ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ 07-07-2021 3:15PM IST / No Comments / Posted In: Latest News, India, Live News ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ ಕೊರೊನಾ ಲಸಿಕೆಯು ಮುಂಚೂಣಿ ಕೆಲಸಗಾರರ ಸಾವಿನ ಪ್ರಮಾಣವನ್ನ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಲ್ಲಿ 1 ಲಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ನಡೆಸಲಾದ ಸಮೀಕ್ಷೆಯಲ್ಲಿ ಈ ಪ್ರಮುಖ ಅಂಶ ತಿಳಿದುಬಂದಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಐಸಿಎಂಆರ್, ಕೊರೊನಾ ಲಸಿಕೆಯು ಮುಂಚೂಣಿ ಕೆಲಸಗಾರರಲ್ಲಿ ಸಾವಿನ ಪ್ರಮಾಣವನ್ನ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಹೇಳಿದೆ. ಅಧ್ಯಯನದಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ, ಮೊದಲ ಡೋಸ್ ಕೊರೊನಾ ಲಸಿಕೆಯನ್ನ ಪಡೆದ ಪೊಲೀಸರಲ್ಲಿ 82 ಪ್ರತಿಶತ ಹಾಗೂ ಎರಡೂ ಡೋಸ್ ಲಸಿಕೆಗಳನ್ನ ಸ್ವೀಕರಿಸಿದವರಲ್ಲಿ 95 ಪ್ರತಿಶತ ಪರಿಣಾಮಕಾರತ್ವವನ್ನ ಕೋವಿಡ್ ಲಸಿಕೆಗಳು ತೋರಿಸಿವೆ . ಈ ಅಧ್ಯಯನದ ಮಾಹಿತಿಯನ್ನ ಐಸಿಎಂಆರ್ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟಿಸಿದೆ. ತಮಿಳುನಾಡಿನ 1,17,524 ಪೊಲೀಸ್ ಅಧಿಕಾರಿಗಳಲ್ಲಿ 32,792 ಮಂದಿ ಮೊದಲ ಡೋಸ್ ಹಾಗೂ 67,673 ಮಂದಿ ಎರಡೂ ಡೋಸ್ಗಳನ್ನ ಸ್ವೀಕಾರ ಮಾಡಿದ್ದಾರೆ. ಅಲ್ಲದೇ 17,059 ಮಂದಿ ಇಲ್ಲಿಯವರೆಗೆ ಯಾವುದೇ ಡೋಸ್ನ್ನು ಸ್ವೀಕಾರ ಮಾಡಿಲ್ಲ. ಏಪ್ರಿಲ್ 13ರಿಂದ ಮೇ 14ರವರೆಗೆ ಕಲೆ ಹಾಕಲಾದ ಮಾಹಿತಿಯ ಪ್ರಕಾರ ತಮಿಳುನಾಡಿನಲ್ಲಿ 31 ಮಂದಿ ಪೊಲೀಸರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ಎರಡು ಡೋಸ್, 7 ಮಂದಿ ಮೊದಲ ಡೋಸ್ ಹಾಗೂ 20 ಮಂದಿ ಕೊರೊನಾ ಲಸಿಕೆಯನ್ನೇ ಸ್ವೀಕರಿಸಿರಲಿಲ್ಲ ಎಂದು ತಿಳಿದು ಬಂದಿದೆ. ICMR study reveals that COVID-19 vaccine is effective in preventing deaths among front line workers. Research article can be access at IJMR portal https://t.co/McnaVa1S9V pic.twitter.com/teJFOXU8PB — ICMR (@ICMRDELHI) July 6, 2021