ಅದು 2020ರ ಜನವರಿ 29. ಚೀನಾದಲ್ಲಿ ಅದಾಗಲೇ ಮಹಾಮಾರಿಯಂತೆ ಹಬ್ಬುತ್ತಾ ಸಾವಿರಾರು ಜನರನ್ನು ಆಸ್ಪತ್ರೆಗೆ ದೂಡಿ, ನೂರಾರು ಪ್ರಾಣ ಬಲಿಪಡೆದಿದ್ದ ’’ಕೊರೊನಾ’’ ಸಾಂಕ್ರಾಮಿಕದ ವೈರಾಣು ಭಾರತವನ್ನು ಪ್ರವೇಶಿಸಿದ್ದು ಇದೇ ದಿನ ರಾತ್ರಿ.
130ಕ್ಕೂ ಕೋಟಿ ಜನರ ದೇಶಕ್ಕೆ ಮಹಾಮಾರಿ ಪ್ರವೇಶಿಸಿದರೆ ಆಗುವ ಭೀಕರತೆಯು ನಮ್ಮನ್ನು ಆತಂಕದಿಂದ ತಲ್ಲಣಿಸುವಂತೆ ಮಾಡಿತ್ತು. ಹಾಗಿದ್ದು, ಉನ್ನತ ಅಧಿಕಾರಿಗಳು, ವಿಜ್ಞಾನಿಗಳ ಜತೆಗೆ ನಿರಂತರ ಸಂಪರ್ಕದೊಂದಿಗೆ ಕೊರೊನಾ ಕೇಸ್ ಖಾತರಿ ಬಗ್ಗೆ ಗೌಪ್ಯವಾಗಿಯೇ ಸರ್ಕಾರದ ಮಟ್ಟದಲ್ಲಿ ಮಾತ್ರ ಚರ್ಚೆ ನಡೆಯುತ್ತಿತ್ತು.
ಡಾ. ರಮಣ್ ಗಂಗಾಖೇದ್ಕರ್ ಎಂಬ ಹಿರಿಯ ವಿಜ್ಞಾನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೇಂದ್ರಕ್ಕೆ ಬಂದಿದ್ದರು. ಅವರಿಗೆ ಕೊರೊನಾ ಭಾರತಕ್ಕೆ ಕಾಲಿಟ್ಟಿರುವ ವರದಿಗಳನ್ನು ನೀಡಿ, ಸರಕಾರಕ್ಕೆ ಎಚ್ಚರಿಸಲು ತಿಳಿಸಲಾಯಿತು. ಅವರು ಕೂಡಲೇ ಆರೋಗ್ಯ ಸಚಿವಾಲಯಕ್ಕೆ ಎಚ್ಚರಿಸಿದರು ಎಂದು ಕೊರೊನಾ ಪ್ರವೇಶದ ಖಾತರಿಯ ಅನುಭವ ಕಥನವನ್ನು ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಅವರು ಮೆಲುಕು ಹಾಕಿದ್ದಾರೆ.
ಅಬ್ಬಾ….! ಒಂದೇ ವಾರದಲ್ಲಿ 23 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ…..!
ಅವರ ಹೊಸ ಪುಸ್ತಕ ’’ ಗೋಯಿಂಗ್ ವೈರಲ್ ’’ ಮಂಗಳವಾರ ಬಿಡುಗಡೆ ಆಗಿದೆ. ಇದರಲ್ಲಿ ತಾವು ಕೊರೊನಾ ಮಹಾಮಾರಿಯ ಕಷ್ಟಕರ ಸಂದರ್ಭಗಳಲ್ಲಿ ನಿರ್ವಹಿಸಿದ ಜವಾಬ್ದಾರಿಯುತ ಹುದ್ದೆಯ ಅನುಭವ, ಸವಾಲುಗಳು, ಸಾಧನೆಗಳನ್ನು ವಿವರಿಸಿದ್ದಾರೆ. ದೇಶಾದ್ಯಂತ ಕೊರೊನಾ ತಪಾಸಣೆ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಕೊರೊನಾ ಮಾದರಿಗಳ ಪರೀಕ್ಷೆಗೆ ಹೆಚ್ಚುವರಿ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಲಸಿಕೆ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದು, ಸೆರೊ ಸಮೀಕ್ಷೆ ನಡೆಸಿ ರೋಗನಿರೋಧಕ ಶಕ್ತಿಯು ಜನರಲ್ಲಿ ಹೆಚ್ಚುತ್ತಿರುವುದನ್ನು ಪತ್ತೆ ಮಾಡಿದಂತಹ ಸವಾಲಿನ ಕೆಲಸಗಳ ಹಿಂದಿನ ಶ್ರಮವನ್ನು ಪುಸ್ತಕದಲ್ಲಿ ವಿವರವಾಗಿ ಡಾ. ಬಲರಾಮ್ ತೆರೆದಿಟ್ಟಿದ್ದಾರೆ.
ಕಾಮುಕ ತಂದೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟ ವಿದ್ಯಾರ್ಥಿನಿ, ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ
ಸಾಮಾನ್ಯವಾಗಿ ಯಾವುದೇ ಲಸಿಕೆ ಪೂರ್ಣ ರೂಪದಲ್ಲಿ ಸಿದ್ಧವಾಗಲು 10 ವರ್ಷಗಳು ಬೇಕಾಗುತ್ತದೆ. ಆದರೆ, ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕೊವ್ಯಾಕ್ಸಿನ್ ಲಸಿಕೆ ಅತ್ಯಂತ ಕಡಿಮೆ ಸಮಯದಲ್ಲಿ ಪರಿಣಾಮಕಾರಿ ಸಿದ್ಧಗೊಂಡಿದ್ದೇ ದೊಡ್ಡ ಸಾಧನೆ. ಕೊರೊನಾ ತಡೆಗಟ್ಟಲು ಕೇಂದ್ರ ಸರಕಾರವು ಬಿಳಿ ಹಾಳೆಯ ಮೇಲೆ ಶಿಫಾರಸು ಕೇಳಿತ್ತು. ಆಗ ನಾವು ಬರೆದಿದ್ದು ಎರಡೇ ವಾಕ್ಯಗಳು. ಒಂದು, ಕೂಡಲೇ ಲಾಕ್‌ಡೌನ್ ಹೇರಿ. ಎರಡನೇಯದು, ಅಂತಾರಾಷ್ಟ್ರೀಯ ಪ್ರಯಾಣವನ್ನು ಪೂರ್ಣವಾಗಿ ನಿರ್ಬಂಧಿಸಿ. ಇದರ ಹೊರತಾಗಿ ಕೊರೊನಾ ಆರ್ಭಟದ ಬಗ್ಗೆ ನಮಗೆ ಮತ್ತೇನೂ ಕೂಡ ಮಾಹಿತಿ ಇರಲಿಲ್ಲ ಎಂದು ಬಲರಾಮ್ ಪುಸ್ತಕದಲ್ಲಿ ತಿಳಿಸಿದ್ದಾರೆ.
ಕೊನೆಯಲ್ಲಿ ಅವರು ಎಚ್ಚರಿಸಿರುವಂತೆ, ಈ ಶತಮಾನಕ್ಕೆ ಅಪ್ಪಳಿಸಿದ ಮೊದಲ ಸಾಂಕ್ರಾಮಿಕ ಕಾಯಿಲೆ ’’ಕೊರೊನಾ’’. ಮುಂದೆ ಇನ್ನೂ ಬರಲಿವೆ!