
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಅಲೆ ಇನ್ನೂ ಮುಗಿದಿಲ್ಲ ಎಂದು ದೇಶದ ಜನರಿಗೆ ಐಸಿಎಂಆರ್ ಮುಖ್ಯಸ್ಥ ಬಲರಾಮ ಭಾರ್ಗವ ತಿಳಿಸಿದ್ದಾರೆ.
ಜನರು ಮಾಸ್ಕ್ ಧರಿಸುವ ಜೊತೆಗೆ ಮಾರ್ಗಸೂಚಿ ಪಾಲಿಸಬೇಕು. ಜನದಟ್ಟಣೆಯನ್ನು ತಡೆಯಬೇಕು ಎಂದು ಹೇಳಿದ ಅವರು, 75 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಶೇಕಡ 10 ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 20 ಡೆಲ್ಟಾ ಪ್ಲಸ್ ಪ್ರಭೇದದ ಪ್ರಕರಣ ಪತ್ತೆಯಾಗಿದೆ. ದೇಶದ 10 ರಾಜ್ಯಗಳಲ್ಲಿ 48 ಡೆಲ್ಟಾಪ್ಲಸ್ ಪ್ರಕರಣಗಳು ಇವೆ. ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಡೆಲ್ಟಾಪ್ಲಸ್ ತಡೆಗೆ ಪರಿಣಾಮಕಾರಿಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಗರ್ಭಿಣಿಯರಿಗೆ ಕೊರೋನಾ ಲಸಿಕೆ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ.