ಕೊರೊನಾ ಸಂದರ್ಭದಲ್ಲಿ ಜನರು ಜನನಿಬಿಡ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಪ್ರೋತ್ಸಾಹ ಸಿಗ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಗಳು ಅನೇಕ ಸೇವೆಗಳನ್ನು ಒದಗಿಸುತ್ತಿವೆ. ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಒಂದು ದಿನದಲ್ಲಿ ಒಂದು ನಿರ್ದಿಷ್ಟ ಮಿತಿಯವರೆಗೆ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ. ಇದು ದೊಡ್ಡ ಮೊತ್ತ ವರ್ಗಾವಣೆ ಮಾಡುವವರಿಗೆ ತೊಂದರೆಯುಂಟು ಮಾಡುತ್ತದೆ. ಆದ್ರೆ ಇನ್ಮುಂದೆ ಚಿಂತಿಸಬೇಕಾಗಿಲ್ಲ.
ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿಗೆ ಒಂದು ದಿನದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಮೊಬೈಲ್ ಮೂಲಕ ವರ್ಗಾವಣೆ ಮಾಡಬಹುದು. ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಈ ಸೇವೆಯನ್ನು ಒದಗಿಸುತ್ತಿದೆ. ಮೊಬೈಲ್ ಸಂಖ್ಯೆ ಸಹಾಯದಿಂದ ಹಣ ವರ್ಗಾವಣೆ ಮಾಡಬಹುದು. ಯುಪಿಐ ಅಥವಾ ಬ್ಯಾಂಕ್ ಖಾತೆ ವಿವರಗಳು ಅಗತ್ಯವಿರುವುದಿಲ್ಲ.
ಮೊದಲು ಬ್ಯಾಂಕ್ ಅಪ್ಲಿಕೇಷನ್ ಓಪನ್ ಮಾಡಬೇಕು. ನಂತ್ರ ಪೇ ಟು ಕಾಂಟೆಕ್ಟ್ ಅಥವಾ ಪೇ ಯುವರ್ ಕಾಂಟೆಕ್ಟ್ ಕ್ಲಿಕ್ ಮಾಡಬೇಕು. ಮೊಬೈಲ್ ಫೋನ್ ಬುಕ್ ತೆರೆಯಿರಿ. ಅದ್ರಲ್ಲಿ ನೀವು ಕಳುಹಿಸುವವರ ಮೊಬೈಲ್ ಸಂಖ್ಯೆಯನ್ನು ಕ್ಲಿಕ್ ಮಾಡಿ. ತಕ್ಷಣ ಬ್ಯಾಂಕ್ ಅಪ್ಲಿಕೇಷನ್ ಯುಪಿಐ ವಿಳಾಸವನ್ನು ತೆಗೆದುಕೊಳ್ಳುತ್ತದೆ. ಆದ್ರೆ ನೀವು ಕಳುಹಿಸುವ ವ್ಯಕ್ತಿ ಬಳಿಯೂ ಯುಪಿಐ ವಿಳಾಸವಿರುವುದು ಬಹಳ ಮುಖ್ಯ. ಪಾಸ್ವರ್ಡ್ ಹಾಗೂ ಮೊತ್ತ ನಮೂದಿಸಿ ಹಣ ವರ್ಗಾವಣೆ ಮಾಡಬೇಕು. ಕೋಟಕ್ ಮಹೀಂದ್ರಾ 50 ಸಾವಿರ ರೂಪಾಯಿ ಪಾವತಿಸಲು ಅನುಮತಿ ನೀಡಿದ್ರೆ ಐಸಿಐಸಿಐ ಬ್ಯಾಂಕ್ 1 ಲಕ್ಷ ಪಾವತಿಗೆ ಅನುಮತಿ ನೀಡುತ್ತದೆ.