ಪುಣೆ: ಐಸ್ ಕ್ರೀಂ ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಪರವಾನಗಿಯನ್ನು ಎಫ್ ಎಸ್ ಎಸ್ ಎ ಐ ರದ್ದು ಮಾಡಿದೆ.
ಪುಣೆಯ ಮಲಾಡ್ ವೆಸ್ಟ್ ನಲ್ಲಿ 26 ವರ್ಷದ ವೈದ್ಯ ಡಾ.ಒರ್ಮಾಲ್ ಬ್ರಾಂಡನ್ ಆನ್ ಲೈನ್ ನಲ್ಲಿ ಐಸ್ ಕ್ರೀಂ ಆರ್ಡರ್ ಮಾಡಿದ್ದರು. ಕೋನ್ ಐಸ್ ಕ್ರೀಂ ನ ಒಂದು ಕೋನ್ ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿತ್ತು. ಎಫ್ ಎಸ್ ಎಸ್ ಎ ಐ ಕಚೇರಿಯ ತಂಡವು ಕಂಪನಿಯ ಆವರಣವನ್ನು ಪರಿಶೀಲಿಸಿದ್ದು, ಕಂಪನಿಯ ಪರವಾನಗಿ ರದ್ದು ಮಾಡಿದೆ.
ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ ನಾನು ಮೂರು ಕೋನ್ ಐಸ್ ಕ್ರೀಂ ಆರಡರ್ ಮಾಡಿದ್ದೆ. ನಾನು ಬಟರ್ ಸ್ಕಾಚ್ ಐಸ್ ಕ್ರೀಂ ತಿನ್ನುವಾಗ ಹಲ್ಲಿಗೇನೋ ತಾಗಿದಂತಾಯ್ತು. ಮೊದಲು ಐಸ್ ಕ್ರೀಂ ನಲ್ಲಿರುವುದು ವಾಲ್ ನಟ್ ಇರಬಹುದು ಎಂದುಕೊಂಡಿದ್ದೆವು. ಉಗುಳಿ ನೋಡಿ ಕೂಲಂಕುಷವಾಗಿ ಪರಿಶೀಲಿಸಿದಾಗ ಅದು ಬೆರಳು ಎಂಬುದು ಗೊತ್ತಾಗಿ ದಿಗ್ಭ್ರಮೆಯುಂಟಾಯಿತು. ಅದು ಮನುಷ್ಯನ ಬೆರಳಿನ ತುಂಡು. ಅದು ಕೂಡ ಹೆಬ್ಬೆರಳಿನ ಭಾಗ ಎಂಬುದು ಗೊತ್ತಾಯಿತು. ಅದರಲ್ಲಿ ಉಗುರು ಕೂಡ ಇದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ. ಐಸ್ ಕ್ರೀಂ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.