ವೆಸ್ಟ್ ಇಂಡೀಸ್ ನಲ್ಲಿ ಜ.14ರಿಂದ ಆರಂಭವಾಗಲಿರುವ ಅಂಡರ್ -19 ವಿಶ್ವಕಪ್ ಗಾಗಿ ಭಾರತೀಯ ಕಿರಿಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಭಾರತ ತಂಡದಲ್ಲಿ 17 ಸದಸ್ಯರಿಗೆ ಅವಕಾಶ ನೀಡಲಾಗಿದೆ. ಯಶ್ ಧುಲ್ ನಾಯಕತ್ವದಲ್ಲಿ ಭಾರತ ತಂಡ ಸೆಣಸಾಟ ನಡೆಸಲಿದೆ. ಭಾರತ ತಂಡದ ಅಭಿಯಾನ ಜ. 15ರಿಂದ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ.
ಭಾರತ ತಂಡ ಇದುವರೆಗೆ ನಾಲ್ಕು ಬಾರಿ ವಿಶ್ವಕಪ್ ಗೆದ್ದಿದೆ. ಕೊನೆಯ ಬಾರಿ 2018 ರಲ್ಲಿ ಕಪ್ ಗೆದ್ದಿತ್ತು. 2020ರಲ್ಲಿ ಫೈನಲ್ ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಮುಗ್ಗರಿಸಿತ್ತು. ಈ ಬಾರಿ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಕೂಡ ಭಾರತ ಒಂದಾಗಿದೆ.
ಭಾರತ ತಂಡದಲ್ಲಿ ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್ ಕ್ರಿಶ್ ರಘುವಂಶಿ, ಎಸ್.ಕೆ. ರಶೀದ್ (ಉಪ ನಾಯಕ), ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ಆರ್ ಎಸ್ ಹಂಗರ್ಗೆಕರ್, ವಾಸು ವತ್ಸ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್ ಸ್ಥಾನ ಪಡೆದಿದ್ದಾರೆ.