ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟವಾಗಿದ್ದು, ಟೀಂ ಇಂಡಿಯಾ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ಅಗ್ರ ಐದರೊಳಗೆ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಚಾರ್ಟ್‌ನಲ್ಲಿ ಅತ್ಯುತ್ತಮ ಸ್ಥಾನದಲ್ಲಿರುವ ಭಾರತೀಯರಾಗಿ ಮುಂದುವರೆದಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರ ಅಶ್ವಿನ್ ಅವರು ಬುಧವಾರದ ಇತ್ತೀಚಿನ ಐಸಿಸಿ ಟೆಸ್ಟ್ ಆಟಗಾರರ ಶ್ರೇಯಾಂಕದಲ್ಲಿ ಬೌಲರ್‌ಗಳಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ರೋಹಿತ್ 5ನೇ ಸ್ಥಾನ, ಕೊಹ್ಲಿ 6ನೇ ಸ್ಥಾನ ಮತ್ತು ಅಶ್ವಿನ್ 2ನೇ ಸ್ಥಾನವನ್ನು ಉಳಿಸಿಕೊಂಡರೆ, ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 10ನೇ ಸ್ಥಾನಕ್ಕೆ ತಲುಪಿದ್ದಾರೆ.
ಅಶ್ವಿನ್ ಅವರನ್ನು ಹೊರತುಪಡಿಸಿ, ಇತರ ಮೂವರು ಆಟಗಾರರು ಸೋಮವಾರ ಕಾನ್ಪುರದಲ್ಲಿ ಡ್ರಾದಲ್ಲಿ ಕೊನೆಗೊಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದರಿಂದ 74 ನೇ ಸ್ಥಾನದಲ್ಲಿ ಬ್ಯಾಟಿಂಗ್ ಶ್ರೇಯಾಂಕವನ್ನು ಪ್ರಡೆದಿದ್ದಾರೆ. ಆದರೆ, ಆರಂಭಿಕ ಆಟಗಾರ ಶುಭಮನ್ ಗಿಲ್ 66 ನೇ ಸ್ಥಾನಕ್ಕೆ ಮತ್ತು ವೃದ್ಧಿಮಾನ್ ಸಹಾ, ಒಂಬತ್ತು ಸ್ಥಾನ ಮೇಲಕ್ಕೇರಿ 99ನೇ ಸ್ಥಾನ ಪಡೆದಿದ್ದಾರೆ.
ಬೌಲರ್‌ಗಳ ಪೈಕಿ ರವೀಂದ್ರ ಜಡೇಜಾ ಎರಡು ಸ್ಥಾನ ಮೇಲಕ್ಕೇರಿ 19ನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತು ಆಲ್‌ರೌಂಡರ್‌ಗಳ ಪೈಕಿ ಒಂದು ಸ್ಥಾನ ಮೇಲೇರಿ ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಮೂರನೇ ಶ್ರೇಯಾಂಕದ ಆಲ್‌ರೌಂಡರ್ ಮತ್ತು ಬ್ಯಾಟರ್‌ಗಳಲ್ಲಿ 79 ನೇ ಸ್ಥಾನದಲ್ಲಿದ್ದಾರೆ.