ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲರ್ ಆರ್. ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ವಿಭಾಗದಲ್ಲಿಯೂ ಉತ್ತಮವಾಗಿ ಆಡಿದ್ದರು. ಹೀಗಾಗಿ ಅವರು ಆಲ್ ರೌಂಡರ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದಿದ್ದಾರೆ.
ಇಂದು ಐಸಿಸಿ ಟೆಸ್ಟ್ ಆಲ್ ರೌಂಡರ್ ಗಳ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಆರ್. ಅಶ್ವಿನ್, ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಜಡೇಜಾ ಪಟ್ಟಿಯಲ್ಲಿ ಹಿಂದೆ ಉಳಿದಿದ್ದಾರೆ. ಈ ಇಬ್ಬರನ್ನು ಹೊರತು ಪಡಿಸಿದರೆ, ಆಲ್ ರೌಂಡರ್ ಪಟ್ಟಿಯಲ್ಲಿ ಭಾರತದ ಸಾಧನೆ ನಿರಾಶಾದಾಯಕವಾಗಿದೆ.
BIG NEWS: ಹೆಲಿಕಾಪ್ಟರ್ ದುರಂತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಇಲ್ಲಿಯವರೆಗೂ ಮೂರನೇ ಸ್ಥಾನದಲ್ಲಿದ್ದ ಅಶ್ವಿನ್ 360 ಅಂಕಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಇದೇ ಸಮಯದಲ್ಲಿ ಭಾರತದ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಎರಡು ಸ್ಥಾನ ಹಿಂದೆ ಹೋಗಿದ್ದಾರೆ. ಈ ಹಿಂದೆ ಜಡೇಜಾ ಎರಡನೇ ಸ್ಥಾನದಲ್ಲಿದ್ದರು. ಸದ್ಯ ಅವರು 346 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಅಶ್ವಿನ್, ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ನಾಲ್ಕನೇ ಸ್ಥಾನದಲ್ಲಿ ರವೀಂದ್ರ ಜಡೇಜಾ, ಐದನೇ ಸ್ಥಾನದಲ್ಲಿ ಶಾಕಿಬ್ ಅಲ್ ಹಸನ್, ಆರನೇ ಸ್ಥಾನದಲ್ಲಿ ಕೈಲ್ ಜೇಮ್ಸನ್, ಏಳನೇ ಸ್ಥಾನದಲ್ಲಿ ಮಿಚೆಲ್ ಸ್ಟಾರ್ಕ್, ಎಂಟನೇ ಸ್ಥಾನದಲ್ಲಿ ಪ್ಯಾಟ್ ಕಮಿನ್ಸ್, ಒಂಭತ್ತನೇ ಸ್ಥಾನದಲ್ಲಿ ಕ್ರಿಸ್ ವೋಕ್ಸ್ ಹಾಗೂ ಹತ್ತನೇ ಸ್ಥಾನದಲ್ಲಿ ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಇದ್ದಾರೆ.