ಐಸಿಸಿ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟವಾಗಿದೆ. ಭಾರತ ಮೊದಲ ಪಂದ್ಯವನ್ನು ಪಾಕಿಸ್ತಾನದ ಜೊತೆ ಆಡಲಿದೆ. ವಿಶ್ವಕಪ್ ಪಂದ್ಯದ ಜೊತೆ ನವೆಂಬರ್ 5ರ ಮೇಲೆ ಎಲ್ಲರ ಕಣ್ಣಿದೆ. ನವೆಂಬರ್ 5ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಕೊಹ್ಲಿ ನವೆಂಬರ್ 5ರಂದು 33ನೇ ವಸಂತಕ್ಕೆ ಕಾಲಿಡ್ತಿದ್ದಾರೆ.
ನವೆಂಬರ್ 5 ರಂದು ವಿಶ್ವಕಪ್ ಬಿ ಗುಂಪಿನ ರನ್ನರ್ ಪಂದ್ಯ ನಡೆಯಲಿದೆ. ಇದು ಕೊಹ್ಲಿಗೆ ವಿಶೇಷವಾಗಿರಲಿದೆ. ಭಾರತ ಸೂಪರ್ 12ನಲ್ಲಿ ನ್ಯೂಜಿಲ್ಯಾಂಡ್, ಪಾಕಿಸ್ತಾನ ಸೇರಿದಂತೆ ಬಲಿಷ್ಠ ತಂಡದ ಜೊತೆ ಸೆಣೆಸಬೇಕಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗುಂಪು 2 ರಲ್ಲಿ ಒಟ್ಟು 5 ಪಂದ್ಯಗಳನ್ನು ಆಡಲಿದೆ. ಭಾರತವು ಅಕ್ಟೋಬರ್ 31 ರಂದು ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಪಂದ್ಯ, ನವೆಂಬರ್ 3ರಂದು ಅಫ್ಘಾನಿಸ್ತಾನದ ವಿರುದ್ಧ 3 ನೇ ಪಂದ್ಯವನ್ನಾಡಲಿದೆ. ನಾಲ್ಕನೇ ಪಂದ್ಯ ನವೆಂಬರ್ 5 ರಂದು ನಡೆಯಲಿದೆ. ಗ್ರೂಪ್ ಬಿ ವಿಜೇತ ತಂಡದ ಜೊತೆ ಈ ಪಂದ್ಯ ನಡೆಯಲಿದೆ.