ನವದೆಹಲಿ: ಸಿಎ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಪರೀಕ್ಷೆ ಬರೆಯಲು ಎರಡನೇ ಅವಕಾಶವನ್ನು ಐಸಿಎಐ ನೀಡುತ್ತಿದೆಯೇ ಎಂದು ಪ್ರಶ್ನಿಸಿದೆ. ಸಿಎ ಪರೀಕ್ಷೆಯಿಂದ ಹೊರಗುಳಿಯುವ ಅವಕಾಶದ ಬಗ್ಗೆ ನಾಳೆ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಜುಲೈನಲ್ಲಿ ಆರಂಭವಾಗಲಿರುವ ಚಾರ್ಟರ್ಡ್ ಅಕೌಂಟೆನ್ಸಿ(ಸಿಎ) ಪರೀಕ್ಷೆಗಳನ್ನು ಮುಂದೂಡಲು ಯಾವುದೇ ನಿರ್ದೇಶನ ನೀಡುವುದಿಲ್ಲವೆಂದು ಮಂಗಳವಾರ ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಆದರೂ, ಕೋವಿಡ್ -19 ಪರಿಸ್ಥಿತಿಗಳಿಂದಾಗಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹೊರಗುಳಿಯುವ ಯೋಜನೆಗೆ ಅವಕಾಶ ನೀಡುವಂತೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಯನ್ನು ಕೇಳಿದೆ.
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ನಾವು ಪರೀಕ್ಷೆಯನ್ನು ನಿಲ್ಲಿಸುತ್ತಿಲ್ಲ. ಆಯ್ಕೆಯಿಂದ ಹೊರಗುಳಿಯುವುದು ಹೇಗೆ ಎಂದು ನಾವು ಪರಿಗಣಿಸಲಿದ್ದೇವೆ. ಐದು ಪತ್ರಿಕೆಗಳ ಪರೀಕ್ಷೆಗಳ ಮಧ್ಯೆ ಒಬ್ಬ ವಿದ್ಯಾರ್ಥಿ ಮೂರು ಪತ್ರಿಕೆಗಳಿಗೆ ಹಾಜರಾದರೆ, ಮುಂದಿನ ಬಾರಿ ಎರಡು ಪತ್ರಿಕೆಗಳನ್ನು ಮಾತ್ರ ಬರೆಯಬಹುದೆ ಎಂಬುದನ್ನು ಗಮನಿಸಲಿದೆ ಎನ್ನಲಾಗಿದೆ.