ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರು ದಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೆನಲ್ ಸೆಲೆಕ್ಷನ್ (ಐಬಿಪಿಎಸ್) – 2021ರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅಕ್ಟೋಬರ್ 1 ರಿಂದ 14ರವರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಸಹಾಯಕ ಪ್ರಾಧ್ಯಾಪಕ, ಸಂಶೋಧನಾ ಸಹಾಯಕ, ಹಿಂದಿ ಆಫೀಸರ್, ಐಟಿ ಇಂಜಿನಿಯರ್ (ಡಾಟಾ ಸೆಂಟರ್), ಸಾಫ್ಟ್ವೇರ್ ಡೆವಲಪರ್, ಟೆಸ್ಟರ್ (ಫ್ರಂಟ್ ಎಂಡ್ , ಬ್ಯಾಕ್ ಎಂಡ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಲಿಖಿತ ಪರೀಕ್ಷೆಯನ್ನು ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ. ಬಳಿಕ ಅದರಲ್ಲಿ ಆಯ್ಕೆಯಾದವರಿಗೆ ಸಂದರ್ಶನ ನಡೆಸಲಾಗುವುದು. ವೇಟಿಂಗ್ ಲಿಸ್ಟ್ ಕೂಡ ಸಿದ್ಧಪಡಿಸಲಾಗುತ್ತಿದ್ದು, 2022ರ ಮಾ. 31ರವರೆಗೂ ಅಭ್ಯರ್ಥಿಗಳು ತಮಗೆ ಕೆಲಸ ಸಿಗುವ ನಿರೀಕ್ಷೆಯನ್ನು ಕಾಯ್ದುಕೊಳ್ಳಬಹುದಾಗಿದೆ.
ಆಸಕ್ತರು ‘ https://ibps.in/ ‘ ವೆಬ್ಸೈಟ್ಗೆ ಭೇಟಿ ನೀಡಿ, ಅಲ್ಲಿನ ನೇಮಕಾತಿ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ ಹೆಸರು ಮತ್ತು ಪಾಸ್ವರ್ಡ್ ನೋಂದಣಿ ಮಾಡಿಕೊಳ್ಳಬೇಕಿದೆ. ಅರ್ಜಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿದರೆ ಲಿಖಿತ ಪರೀಕ್ಷೆಯ ದಿನಾಂಕದ ಬಗ್ಗೆ ಅಭ್ಯರ್ಥಿಗಳಿಗೆ ನಂತರದಲ್ಲಿ ತಿಳಿಸಲಾಗುತ್ತದೆ. ಈ ಬಾರಿ ಅರ್ಜಿಯ ಶುಲ್ಕವನ್ನು 1000 ರೂ. ಎಂದು ನಿಗದಿಪಡಿಸಲಾಗಿದೆ.