ಮಹಾರಾಷ್ಟ್ರದ ಪುಣೆಯಲ್ಲಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಮ್ಮ ವಿಐಪಿ ಬೇಡಿಕೆಯ ನಂತರ ನಿರಂತರ ಚರ್ಚೆಯಲ್ಲಿದ್ದಾರೆ. ಪೂಜಾ ಖೇಡ್ಕರ್ ಬಗ್ಗೆ ಹಲವು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ವಿವಾದಗಳ ಸುಳಿಯಲ್ಲಿ ಸಿಲುಕಿರುವ ಐಎಎಸ್ ಅಧಿಕಾರಿ ಖೇಡ್ಕರ್ ಅವರ ಕುಟುಂಬ ಬಂಗಲೆಯ ಮುಂಭಾಗದ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪೂಜಾ ಖೇಡ್ಕರ್ ಕುಟುಂಬ, ಫುಟ್ ಪಾತ್ ಮೇಲೆ ಸಸಿಗಳನ್ನು ನೆಟ್ಟಿದೆ. ಈ ಬಂಗಲೆ ಪುಣೆಯ ಬಾನೇರ್ ಪ್ರದೇಶದಲ್ಲಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗಿದೆ. ಫುಟ್ ಪಾತ್ ಮೇಲೆ ಗಿಡ ಬೆಳೆಸಿರುವ ಕುಟುಂಬಕ್ಕೆ ನೊಟೀಸ್ ನೀಡಿದ್ದು, ಅದನ್ನು ಗೋಡೆಗೆ ಅಂಟಿಸಲಾಗಿದೆ. ಏಳು ದಿನಗಳೊಳಗೆ ಇದನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.
ತರಬೇತಿ ನಿರತ ಐಎಎಸ್ ಪೂಜಾ ಖೇಡ್ಕರ್ ಅವರ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ನಂತರ ಪುಣೆಯಿಂದ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಗೆ ವರ್ಗಾಯಿಸಲಾಗಿದೆ. ಯುಪಿಎಸ್ಸಿ 2021ರ ಪರೀಕ್ಷೆಯಲ್ಲಿ ಪೂಜಾ ಉತ್ತೀರ್ಣರಾಗಿದ್ದರು. ತಪ್ಪು ದಾಖಲೆ ನೀಡಿ, ವಿಕಲಾಂಗೆ ಎಂದಿದ್ದ ಪೂಜಾ ಖೇಡ್ಕರ್, ವಾರ್ಷಿಕ ಆದಾಯ 42 ಲಕ್ಷ ರೂಪಾಯಿ ಎಂಬ ವಿಷ್ಯವೂ ಬಹಿರಂಗವಾಗಿದೆ.