
ನಮ್ಮಲ್ಲಿ ಕೆಲವರಿಗೆ ಖುದ್ದು ಹೆತ್ತವರೇ ಶಿಕ್ಷಕರಾಗಿರುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ಕಳೆದ ಒಂದು ವರ್ಷದಲ್ಲಿ ಮನೆಯಲ್ಲಿ ಮಕ್ಕಳನ್ನು ಆನ್ಲೈನ್ ಕ್ಲಾಸ್‌ಗಳಲ್ಲಿ ಭಾಗಿಯಾಗಿರುವ ಮಕ್ಕಳನ್ನು ಪಾಠಗಳ ಮೇಲೆ ಗಮನ ಇರುವಂತೆ ಮಾಡುವುದು ಎಷ್ಟು ಕಷ್ಟವಾಗಿದೆ ಎಂದು ಕಣ್ಣಾರೆ ನೋಡಿಕೊಂಡೇ ಬಂದಿದ್ದೇವೆ.
ನವೀದ್ ಟ್ರುಂಬೂ ಹೆಸರಿನ ಐಎಎಸ್ ಅಧಿಕಾರಿಯೊಬ್ಬರು ಖುದ್ದು ಶಿಕ್ಷಕಿಯಾದ ತಮ್ಮ ತಾಯಿಗೆ ಶಿಕ್ಷಕರ ದಿನಾಚರಣೆಯ ನುಡಿನಮನ ಸಲ್ಲಿಸಿದ್ದಾರೆ. ನವೀದ್ ಶೇರ್ ಮಾಡಿದ ಫೋಟೋದಲ್ಲಿ ಅವರ ತಾಯಿ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದು, ಕೋವಿಡ್-19 ಕಾರಣದಿಂದಾಗಿ ಹೊಸ ವಾಸ್ತವಕ್ಕೆ ಒಗ್ಗಲು ಅವರು ಏನೆಲ್ಲಾ ಕಷ್ಟ ಪಡುತ್ತಿದ್ದಾರೆ ಎಂದು ವಿವರಿಸುವ ಯತ್ನ ಮಾಡಿದ್ದಾರೆ.
ಶಾಲೆ ಪ್ರಾರಂಭವಾಗ್ತಿದ್ದಂತೆ ಪಾಲಕರು, ಶಿಕ್ಷಕರಲ್ಲಿ ಹೆಚ್ಚಾಗಿದೆ ಜವಾಬ್ದಾರಿ
“ಲ್ಯಾಪ್ಟಾಪ್ ಶಿಕ್ಷಕಿಯಾಗುವುದರಿಂದ ಹಿಡಿದು, ಜ಼ೂಮ್‌ನಲ್ಲಿ ಆನ್ಲೈನ್ ಕ್ಲಾಸ್‌ಗಳನ್ನು ಹೋಸ್ಟ್ ಮಾಡುವವರೆಗೂ, ಪಿಪಿಟಿ ಹಾಗೂ ಚಾರ್ಟ್‌ಗಳನ್ನು ಮಾಡುತ್ತಾ, ನನ್ನ ತಾಯಿ ಶಿಕ್ಷಕಿಯಾಗಿ ಬಹಳ ದೂರ ಬಂದಿದ್ದಾರೆ. ಈ ಶಿಕ್ಷಕರ ದಿನಾಚರಣೆಯಂದು, ನಾನು ನನ್ನ ತಾಯಿ ಬಗ್ಗೆ ಹೆಮ್ಮೆಪಡುತ್ತಿದ್ದು, ತಮ್ಮ ವಿದ್ಯಾರ್ಥಿಗಳಿಗಾಗಿ ಚಿಕ್ಕ ಅವಧಿಯಲ್ಲಿ ಏನೆಲ್ಲಾ ಕೌಶಲ್ಯಗಳನ್ನು ಕಲಿತ ಎಲ್ಲಾ ಶಿಕ್ಷಕರ ಬಗ್ಗೆಯೂ ಹೆಮ್ಮೆಯೆನಿಸುತ್ತಿದೆ” ಎಂದು ನವೀದ್ ತಿಳಿಸಿದ್ದಾರೆ.