ಮಾನವೀಯತೆ ಮರೆಯಾಗಿ ಸ್ವಾರ್ಥವೇ ಹೆಚ್ಚಾಗಿ ಮೆರೆಯುತ್ತಿರುವ ಇಂದಿನ ದಿನಗಳಲ್ಲಿ ನಡೆಯುವ ಕೆಲವೊಂದು ಘಟನೆಗಳು ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾಬೀತುಪಡಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅಂತವುದೇ ಘಟನೆಯೊಂದರ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದು, ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಮೂಲತಃ ಈ ವಿಡಿಯೋವನ್ನು ತರುಣ್ ಮಿಶ್ರಾ ಎಂಬ ಬ್ಲಾಗರ್ ರೆಕಾರ್ಡ್ ಮಾಡಿದ್ದು, ಚಿಂದಿ ಆಯುತ್ತಿರುವ 75 ವರ್ಷದ ಮಹಿಳೆಯೊಬ್ಬರನ್ನು ತೋರಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಈ ಮಹಿಳೆಯನ್ನು ತರುಣ್ ಪ್ರಶ್ನಿಸಿದಾಗ, ಇದನ್ನು ಆರಿಸಿಕೊಂಡು ಮಾರಾಟ ಮಾಡಿ ನಾನು ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದರಿಂದ ಮನ ಕರಗಿದ ತರುಣ್ ಆಕೆಗೆ ತರಕಾರಿ ವ್ಯಾಪಾರ ಆರಂಭಿಸಲು ನೆರವಾಗಿದ್ದು, ತೂಕದ ಯಂತ್ರ, ತರಕಾರಿ ಗಾಡಿ ಹಾಗೂ ತಾಜಾ ತರಕಾರಿಗಳಂತಹ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಿ ನೀಡಿದ್ದಾರೆ. ಅಲ್ಲದೆ ಮಹಿಳೆಗೆ ದಿನಸಿ ಸಹ ಖರೀದಿಸಿ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ಮೆಚ್ಚಿಕೊಂಡಿದ್ದು ತರುಣ್ ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.