ರೈತರು ತಮ್ಮ ಚಟುವಟಿಕೆಗಳಲ್ಲಿ ತಾವೇ ಅನೇಕ ಆವಿಷ್ಕಾರ ಮಾಡಿಕೊಳ್ಳುತ್ತಿರುತ್ತಾರೆ. ವಿದ್ಯಾರ್ಥಿಗಳ ತಂಡವೊಂದು ರೈತರ ಅನುಕೂಲಕ್ಕಾಗಿ ಎತ್ತಿನ ಬಂಡಿಗೆ ಹೆಚ್ಚುವರಿಯಾಗಿ ಇನ್ನೊಂದು ಚಕ್ರ ಬಳಸಿ ಚಾಕಚಕ್ಯತೆ ಮೆರೆದಿದ್ದಾರೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡ ವಿಡಿಯೋದಲ್ಲಿ ಎತ್ತುಗಳಿಗೆ ಭಾರ ಕಡಿಮೆ ಮಾಡಲು ಗಾಡಿಯಲ್ಲಿ ವಿನೂತನ ವಿನ್ಯಾಸ ಮಾಡಿರುವುದನ್ನು ಕಾಣಬಹುದು.
ಈಗ ವೈರಲ್ ಆಗಿರುವ ಚಿತ್ರದಲ್ಲಿ, ಎರಡು ಸಾಮಾನ್ಯ ಚಕ್ರಗಳೊಂದಿಗೆ ಎತ್ತಿನ ಬಂಡಿಯನ್ನು ಕಾಣಬಹುದು. ಜೊತೆಗೆ ಈ ವಿಶಿಷ್ಟ ಗಾಡಿ ಪೋರ್ಟಬಲ್ ಚಕ್ರವನ್ನು ಹೊಂದಿರುವುದು ಕಾಣಿಸುತ್ತದೆ.
ಅ ಚಕ್ರವು ರೋಲಿಂಗ್ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿ ಟೈರ್‌ನಿಂದಾಗಿ, ಎತ್ತುಗಳು ಹೊತ್ತೊಯ್ಯುವ ಹೊರೆ ಗಮನಾರ್ಹವಾಗಿ ಕಡಿಮೆ ಮಾಡಬಹುದು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ರಾಜಾರಾಂಬಾಪು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಯ ವಿದ್ಯಾರ್ಥಿಗಳ ಗುಂಪು ಈ ತಂತ್ರವನ್ನು ವಿನ್ಯಾಸಗೊಳಿಸಿದೆ.