ಹೇಳುವ ಉಪದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಪ್ರಮೇಯ ನಮ್ಮಗಳ ನಡುವೆ ಸಾಮಾನ್ಯ ಸಂಗತಿ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡ ಒಂದು ಪೋಸ್ಟ್ ಈ ಮಾತಿಗೆ ಪೂರಕವಾಗಿದೆ.
ಕಟ್ಟಿಗೆ ಸಾಗಿಸುತ್ತಿದ್ದ ಟ್ರಕ್ ಒಂದರ ಫೋಟೋವನ್ನು ಅವರನ್ನು ಹಂಚಿಕೊಂಡಿದ್ದು, ಆ ಟ್ರಕ್ ಹಿಂಭಾಗದಲ್ಲಿ ಅರ್ಥಪೂರ್ಣ ಸಾಲಿದ್ದರೂ, ಅದು ಅಣಕಿಸುವ ಅಥವಾ ವೈರುಧ್ಯಪೂರ್ಣವಾಗಿತ್ತು.
ಅವನೀಶ್ ಶರಣ್ ಅವರು ʼವ್ಯಂಗ್ಯದ ವ್ಯಾಖ್ಯಾನ’ ಎಂಬ ಶೀಷಿರ್ಕೆಯೊಂದಿಗೆ ಆ ಫೋಟೊ ಹಂಚಿಕೊಂಡಿದ್ದು, ಈ ಪೋಸ್ಟ್ ನಿಸ್ಸಂಶಯವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಯಿತು.
ರಸ್ತೆಯಲ್ಲಿ ಕಟ್ಟಿಗೆ ತುಂಬಿದ ಟ್ರಕ್ ಸಾಗುವ ಚಿತ್ರ ಅದರಲ್ಲಿದೆ. ಕಡಿದ ಮರದ ದಿಮ್ಮಿಗಳು ಅಲ್ಲಿ ಕಾಣಿಸುತ್ತಿದೆ. ವಾಹನದ ಹಿಂಭಾಗದಲ್ಲಿ “ಹೆಚ್ಚು ಮರಗಳನ್ನು ನೆಡು” ಎಂಬ ಸಂದೇಶವನ್ನು ಬರೆಯಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತಮ್ಮ ಆಲೋಚನಾ ಲಹರಿ ಹರಿಬಿಟ್ಟಿದ್ದು, ವಾಸ್ತವ ಸಂಗತಿ ಎಂದು ಹೇಳಿದ್ದಾರೆ.
ʼಇದು ವ್ಯಂಗ್ಯವಲ್ಲ, ಇದು ವ್ಯವಹಾರದ ಮಾದರಿ’ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ʼನಾವು ನಮ್ಮ ಪರಿಸರವನ್ನು ಹೇಗೆ ರಕ್ಷಿಸುತ್ತೇವೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದಿದ್ದಾರೆ.