ದೇಶದ ಹಲವೆಡೆ ಗುಟ್ಕಾ ನಿಷೇಧ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಿ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ತಮ್ಮ ಚಾಳಿಯನ್ನು ಬಿಡುವಂತೆ ಕಾಣುತ್ತಿಲ್ಲ.
ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಟ್ಕಾ ತಿಂದು ಉಗಿಯುವುದು ಸಾಮಾನ್ಯವಾಗಿದೆ. ಆದರೆ, ವಿಮಾನದಲ್ಲಿ ಉಗಿದರೆ !!! ಹುಬ್ಬೇರಿಸಬೇಡಿ. ವಿಮಾನದಲ್ಲಿಯೂ ಗುಟ್ಕಾ ತಿಂದು ಕಿಟಕಿ ಕಡೆಯ ಸೀಟಿನ ಕೆಳಗೆ ದುರುಳನೊಬ್ಬ ಉಗಿದು ಹೋಗಿದ್ದಾನೆ.
SBI ಗ್ರಾಹಕರಿಗೆ ಗುಡ್ ನ್ಯೂಸ್: ಯೋನೊ ಆಪ್ ಮೂಲಕ ಪಡೆಯಬಹುದು 35 ಲಕ್ಷ ರೂ. ವರೆಗೆ ಸಾಲ
ಇದನ್ನು ಗಮನಿಸಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಫೋಟೋ ತೆಗೆದು ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಜನರ ಮನಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ಈ ಕೊಳಕು ವ್ಯಕ್ತಿಯ ಬಗ್ಗೆ ಅಧಿಕಾರಿ, ಯಾರೋ ವ್ಯಕ್ತಿ ತನ್ನ ಗುರುತನ್ನು ಹೀಗೆ ಬಿಟ್ಟು ಹೋಗಿದ್ದಾನೆ’ ಎಂದು ಗುಟ್ಕಾ ಉಗಿದಿದ್ದ ವ್ಯಕ್ತಿಯ ಮೇಲೆ ಕಿಡಿಕಾರಿದ್ದಾರೆ.
ಈ ಕೊಳಕಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಉಗಿದ ವ್ಯಕ್ತಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಬಸ್, ರೈಲುಗಳಲ್ಲಿ ಇಂತಹ ಅಸಹ್ಯವನ್ನು ನೋಡುತ್ತಿದ್ದೆವು. ಈಗ ವಿಮಾನದಲ್ಲಿಯೂ ಇಂತಹ ಅಸಹ್ಯವನ್ನು ನೋಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗಿದವನು ಯಾರು ಎಂದು ಪತ್ತೆ ಮಾಡಿ ಅವನ ಶರ್ಟ್ ಅನ್ನು ಬಿಚ್ಚಿಸಿ ಅದರಿಂದ ಒರೆಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಒತ್ತಾಯಿಸಿದ್ದರೆ, ಆ ವ್ಯಕ್ತಿಯನ್ನು ಪತ್ತೆ ಮಾಡಿ ಇನ್ನೆಂದೂ ಇಂತಹ ಕೃತ್ಯ ಎಸಗದ ರೀತಿಯಲ್ಲಿ ಭಾರೀ ದಂಡ ವಿಧಿಸಬೇಕು ಎಂದು ಇನ್ನೂ ಕೆಲವರು ಆಗ್ರಹಿಸಿದ್ದಾರೆ.