ಐಎಎಸ್ ಅಧಿಕಾರಿ ಅವನೀಶ್ ಶರಣ್ ನೀರು ಉಳಿಸುವ ಬಗ್ಗೆ ಮಿಲಿಯನ್ ಡಾಲರ್ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಈ ಸಂದೇಶಗಳನ್ನು ಶೇರ್ ಮಾಡಿದ್ದಾರೆ.
ಅದರಲ್ಲಿ ನೀರು ಉಳಿಸುವ ಕುರಿತು ಮಾತನಾಡುವ ವ್ಯಕ್ತಿಯೊಬ್ಬರು ಕೈಯಲ್ಲಿ ಫಲಕ ಹಿಡಿದು ನಿಂತುಕೊಂಡಿರುವುನ್ನು ನೋಡಬಹುದು. ‘”ಪೂರ್ಣ ಅಗತ್ಯವಿಲ್ಲದಿದ್ದಾಗ, ಸ್ವಲ್ಪ ನೀರನ್ನು ಕೇಳಿ” ಎಂದು ಬರೆಯಲಾಗಿದೆ. ಇದು ಸರಳವಾದ ಆದರೆ ಶಕ್ತಿಯುತ ಸಂದೇಶವಾಗಿದೆ ಎಂದು ಕಮೆಂಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
“ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಅರ್ಧ ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಅಗತ್ಯವಿದ್ದಾಗ ಮಾತ್ರ ಹೆಚ್ಚಿನದನ್ನು ಕೇಳಿ,” ಎಂದು ಐಎಎಸ್ ಅಧಿಕಾರಿ ಈ ಪೋಸ್ಟ್ನ ಕುರಿತು ಉಲ್ಲೇಖಿಸಿದ್ದಾರೆ.
ಎಷ್ಟೋ ಸಂದರ್ಭದಲ್ಲಿ ಹೋಟೆಲ್ ಹಾಗೂ ಇತರ ಕಡೆಗಳಲ್ಲಿ ಹೋದಾಗ ಫುಲ್ ಗ್ಲಾಸ್ ನೀರನ್ನು ಪಡೆದು ಅರ್ಧ ಕುಡಿದು ಅರ್ಧ ಚೆಲ್ಲುತ್ತಿದ್ದೇವೆ. ಇದರಿಂದ ನೀರಿನ ದುರ್ಬಳಕೆ ಆಗುತ್ತದೆ. ಆದ್ದರಿಂದ ಬೇಕಾದಷ್ಟೇ ನೀರನ್ನು ಕೇಳಿ ಪಡೆಯಿರಿ ಎಂಬ ಸಂದೇಶ ಇದಾಗಿದೆ.