ಐಎಎಸ್ ಅಧಿಕಾರಿ ಶಾಹಿದ್ ಚೌಧರಿ ಅವರು ತಮ್ಮ 10ನೇ ತರಗತಿಯ ಅಂಕಪಟ್ಟಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು 1997 ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಂಡಳಿಯಿಂದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದನ್ನು ಅಂಕಪಟ್ಟಿಯಲ್ಲಿ ನೋಡಿ ತಿಳಿಯಬಹುದು. ಅಧಿಕಾರಿ ಇಂಗ್ಲಿಷ್, ವಿಜ್ಞಾನ, ಉರ್ದು ಮತ್ತು ಸಾಮಾಜಿಕ ಅಧ್ಯಯನಗಳಂತಹ ವಿಷಯಗಳಲ್ಲಿ ಗಳಿಸಿದ ಅಂಕಗಳನ್ನು ಸಹ ಅಂಕಪಟ್ಟಿಯಲ್ಲಿ ನೋಡಬಹುದು.
ಹಲವಾರು ವಿದ್ಯಾರ್ಥಿಗಳು ತನ್ನ ಅಂಕಪಟ್ಟಿಯನ್ನು ನೋಡಲು ಒತ್ತಾಯಿಸಿದ್ದರಿಂದ, ಶಾಹಿದ್ ತನ್ನ 10ನೇ ತರಗತಿಯ ಅಂಕಪಟ್ಟಿಯನ್ನು ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ, 1997 ರ 10ನೇ ತರಗತಿಯ ತನ್ನ ಅಂಕ ಪಟ್ಟಿ ಇಲ್ಲಿದೆ. 500ರಲ್ಲಿ 339 ಮಾರ್ಕ್ಸ್ ಪಡೆದಿರುವುದಾಗಿ ಅವರು ಹಂಚಿಕೊಂಡಿದ್ದಾರೆ.
ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ಬಹಳ ವೇಗವಾಗಿ ವೈರಲ್ ಆಯಿತು. ನೆಟ್ಟಿಗರು ಪ್ರತಿಕ್ರಿಯೆಗಳ ಅಲೆಯನ್ನೇ ಹರಿಸಿದ್ದಾರೆ. ಯಾವುದೇ ಗ್ರೇಡ್‌ಗಳಿದ್ದರೂ, ಸಮರ್ಪಣಾ ಮನೋಭಾವವನ್ನು ಹೊಂದಿದ್ದಲ್ಲಿ ವ್ಯಕ್ತಿಯು ಜೀವನದಲ್ಲಿ ಉನ್ನತ ಹುದ್ದೆ ಅಥವಾ ಸಾಧಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಅಂದರೆ ಟಾಪರ್ ಗಳಾಗಿದ್ದವರು ಮಾತ್ರ ಜೀವನದಲ್ಲಿ ಸಾಧನೆ ಮಾಡಿರುವುದಿಲ್ಲ. ಅವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಕೂಡ ಸಾಧನೆಯ ಶಿಖರ ಏರಬಹುದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ರು.