
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಇತ್ತೀಚೆಗೆ ಸಾರ್ವಜನಿಕ ಸಮಾರಂಭದಲ್ಲಿ ಮೇಜಿನ ಮೇಲೆ ಅರ್ಧ ತಿಂದ ಆಹಾರದ ಪ್ಲೇಟ್‌ಗಳನ್ನು ರಾಶಿ ಹಾಕಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಇಂಥ ಜನರನ್ನು ಯಾವುದೇ ಸಮಾರಂಭಕ್ಕೆ ಹಾಜರಾಗದಂತೆ ನಿಷೇಧಿಸಬೇಕು ಎಂದು ನೋವಿನಿಂದ ಅವರು ನುಡಿದಿದ್ದಾರೆ.
ಈ ಟ್ವೀಟ್ ಶೀಘ್ರದಲ್ಲೇ ಸಾವಿರಾರು ಲೈಕ್‌ಗಳನ್ನು ಸಂಗ್ರಹಿಸಿದೆ. ಆಹಾರವನ್ನು ವ್ಯರ್ಥ ಮಾಡುವ ಅಭ್ಯಾಸದ ಕುರಿತು ಹಲವಾರು ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರವನ್ನು ಬಿಡುವುದು ಫ್ಯಾಷನ್ ಆಗಿದೆ. ಅಷ್ಟೂ ಆಹಾರ ತಿಂದರೆ ಜನರು ಏನನ್ನುತ್ತಾರೋ ಎನ್ನುವ ಮನೋಭಾವದಿಂದಲೂ ಈ ರೀತಿ ಆಹಾರ ವ್ಯರ್ಥವಾಗುತ್ತಿದೆ ಎಂದು ಹಲವರು ಹೇಳಿದ್ದಾರೆ.