ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಮತ್ತು ಪರಿಶೀಲಿಸಲು ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯೋನ್ಮುಖವಾಗಲು ಅನುಕೂಲವಾಗುವಂತೆ 8 ಐಎಎಸ್ ಅಧಿಕಾರಿಗಳನ್ನು ವಲಯ ಸಂಯೋಜಕರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಬೆಂಗಳೂರು ಪೂರ್ವ -ಮನೋಜ್ ಕುಮಾರ್ ಮೀನಾ
ಬೆಂಗಳೂರು ಪಶ್ಚಿಮ -ಉಜ್ವಲ್ ಕುಮಾರ್ ಘೋಷ್
ಬೊಮ್ಮನಹಳ್ಳಿ –ಡಾ. ರವಿಕುಮಾರ್ ಸುರಪುರ್
ಯಲಹಂಕ –ವಿ. ಅನ್ಬುಕುಮಾರ್
ಬೆಂಗಳೂರು ದಕ್ಷಿಣ -ಪಂಕಜ್ ಕುಮಾರ್ ಪಾಂಡೆ
ಮಹಾದೇವಪುರ –ಡಾ. ಎನ್. ಮಂಜುಳಾ
ದಾಸರಹಳ್ಳಿ –ಡಾ. ಪಿ.ಸಿ. ಜಾಫರ್
ರಾಜರಾಜೇಶ್ವರಿನಗರ –ಡಾ. ಆರ್. ವಿಶಾಲ್
ಅವರನ್ನು ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರು ನೇಮಕ ಮಾಡಿದ್ದಾರೆ.