
ಕಾಬೂಲ್: ಆಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆ ತರಲು ಹೊರಟ ಭಾರತೀಯ ವಾಯುಸೇನೆ ವಿಮಾನ ಕಾಬುಲ್ ತಲುಪಿದೆ.
ಆಫ್ಘಾನಿಸ್ಥಾನದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಸೇರಿ 500 ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ಭಾರತೀಯ ಯುದ್ಧ ವಿಮಾನ ಕಾಬುಲ್ ತಲುಪಿದ್ದು, ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗುವುದು. ಸಿ -17 ಯುದ್ಧ ವಿಮಾನದಲ್ಲಿ ಭಾರತೀಯರನ್ನು ಕರೆತರಲಾಗುವುದು.
ಅಧ್ಯಕ್ಷರ ಭವನಕ್ಕೆ ಉಗ್ರರ ಲಗ್ಗೆ
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕರು ಅಟ್ಟಹಾಸ ತೋರಿದ್ದಾರೆ. ಅಧ್ಯಕ್ಷ ಭವನಕ್ಕೆ ನುಗ್ಗಿದ ತಾಲಿಬಾನ್ ಕಣ್ಣಿಗೆ ಕಂಡಿದ್ದು ಕೈಗೆ ಸಿಕ್ಕಿದ್ದನ್ನೆಲ್ಲ ತಿಂದು ತೇಗಿದ್ದಾರೆ. ಇಷ್ಟು ದಿನ ಕಾಡುಮೇಡು ಗುಡ್ಡಗಳಲ್ಲಿ ಅವಿತುಕೊಂಡಿದ್ದ ಉಗ್ರರು ಅಧ್ಯಕ್ಷರ ಭವನದಲ್ಲಿ ಎಲ್ಲೆಂದರಲ್ಲಿ ಕುಳಿತುಕೊಂಡು ಮೋಜು ಮಸ್ತಿ ಮಾಡಿದ್ದಾರೆ.