ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದ ಕಲೈಕುಂಡ ಏರ್ ಬೇಸ್ ಬಳಿ ಐಎಎಫ್ ಫೈಟರ್ ಜೆಟ್ ಪತನಗೊಂಡಿದೆ.
ಮಂಗಳವಾರ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕಲೈಕುಂಡ ವಾಯುನೆಲೆಯಲ್ಲಿ ವಾಯುಪಡೆಯ ತರಬೇತಿಯ ವೇಳೆ ಫೈಟರ್ ಜೆಟ್ ಡಯಾಸಾ ಪ್ರದೇಶದಲ್ಲಿ ಪತನಗೊಂಡಿದೆ. ವಾಯುಪಡೆಯ ಪೈಲಟ್ ಪ್ಯಾರಾಚೂಟ್ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ 3:35ರ ಸುಮಾರಿಗೆ ಯುದ್ಧವಿಮಾನ ಭತ್ತದ ಗದ್ದೆಯಲ್ಲಿ ಬಿದ್ದಿದೆ. ವಿಮಾನ ಪತನವಾದಾಗ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.