alex Certify ಬೈಸೆಪ್ಸ್​ ತೋರಿಸಿದ ಯುವಕನನ್ನು ಕಾರ್ಟೂನ್​​ ಪಾತ್ರಧಾರಿಗೆ ಹೋಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಸೆಪ್ಸ್​ ತೋರಿಸಿದ ಯುವಕನನ್ನು ಕಾರ್ಟೂನ್​​ ಪಾತ್ರಧಾರಿಗೆ ಹೋಲಿಕೆ

ಈಜಿಪ್ಟ್​​ನ ವಿದ್ಯಾರ್ಥಿ ಮಲೇಕ್​ ಸಮೇಹ್​​ ವಿಡಿಯೋವೊಂದರ ಮೂಲಕ ಇಂಟರ್ನೆಟ್​​ನಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದಾರೆ . ಟಿಕ್ ​ಟಾಕ್​ನಲ್ಲಿ ಈತ ತನ್ನ ಬೈಸೆಪ್ಸ್​ ನ್ನು ತೋರಿಸಿದ್ದು ಇದನ್ನ ನೋಡಿದ ನೆಟ್ಟಿಗರು ಈತನನ್ನ ಪಾಪ್​ಐಗೆ ಹೋಲಿಸಿದ್ದಾರೆ.

18 ವರ್ಷದ ಮಲೇಕ್​​ ಮೊದಲು ತನ್ನ ಕೈಯಲ್ಲಿ ಸಾಮಾನ್ಯ ಸ್ಥಿತಿಯಲ್ಲೇ ಇಟ್ಟಿರ್ತಾನೆ. ಬಳಿಕ ಕೈಯನ್ನ ಮೇಲಕ್ಕೆತ್ತಿ ಬೈಸೆಪ್ಸ್ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೋಗೆ ಈತ ಸ್ವಲ್ಪ ಕಾಯಿರಿ ಎಂದು ಶೀರ್ಷಿಕೆ ನೀಡಿದ್ದಾನೆ.

ಈತನ ಬೈಸೆಪ್ಸ್ ನೋಡಿದ ನೆಟ್ಟಿಗರಿಗೆ ಹೆಸರಾಂತ ಕಾರ್ಟೂನ್​ ಪಾತ್ರವಾದ ಪಾಪ್​ಐ ನೆನಪಿಗೆ ಬಂದಿದೆ. ಈ ವಿಡಿಯೋವನ್ನ ಆತ ಇನ್​ಸ್ಟಾಗ್ರಾಂನಲ್ಲೂ ಶೇರ್​ ಮಾಡಿದ್ದಾನೆ.

ನಾನು ದೊಗಲೆ ಟೀ ಶರ್ಟ್ ಧರಿಸಲು ಪ್ಲಾನ್​ ಮಾಡಿದ್ದೆ. ಆದರೆ ಅದರಲ್ಲಿ ನಾನು ಇನ್ನೂ ಕಡ್ಡಿಯಂತೆ ಕಾಣುತ್ತೇನೆ. ಹೀಗಾಗಿ ನಾನು ಟೀ ಶರ್ಟ್​ನ ಸ್ಲೀವ್ ಮೇಲಕೆತ್ತಿ ಬೈಸೆಪ್ಸ್​ ತೋರಿಸಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಯಿತು ಎಂದು ಮಲೇಕ್​ ಹೇಳಿದ್ದಾನೆ.

ಮಲೇಕ್​ ಸಮೇಹ್​​ ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್​ ಪೇಜ್​​ನಲ್ಲಿ ಈತನ ವರ್ಕೌಟ್​ ವಿಡಿಯೋಗಳೇ ತುಂಬಿ ಹೋಗಿವೆ.

https://www.instagram.com/p/COJh9OtHyDM/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...