ಅವರವರ ಕಷ್ಟ ಅವರಿಗೇ ಗೊತ್ತು. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಕಷ್ಟವನ್ನು ಅನುಭವಿಸುತ್ತಾರೆ. ಅವರು ಅನುಭವಿಸುವ ಪ್ರಕೃತಿದತ್ತವಾಗಿ ಬಂದ ನೋವುಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ ಅಥವಾ ಮುಜುಗರಪಡುತ್ತಾರೆ.
ಈ ಪ್ರಕೃತಿದತ್ತವಾದ ನೋವುಗಳು ಕೆಲವೊಮ್ಮೆ ಅವರ ಶಿಖರದೆತ್ತರದ ಆಸೆ ಆಕಾಂಕ್ಷೆಗಳನ್ನು ಕಿತ್ತುಕೊಳ್ಳುತ್ತವೆ. ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಚೀನಾದ ಖ್ಯಾತ ಟೆನ್ನಿಸ್ ತಾರೆ ಷೆಂಗ್ ಕಿನ್ವೆನ್ ಅವರಿಗೆ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಾದ ಹಿನ್ನಡೆ.
BIG NEWS: ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ: ಹೊಸ ಬಾಂಬ್ ಸಿಡಿಸಿದ ಸಿ.ಎಂ.ಇಬ್ರಾಹಿಂ
ಪ್ರಕೃತಿದತ್ತವಾದ ಮುಟ್ಟು ಅವರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ. ಸೋಮವಾರ ನಡೆದ ಫ್ರೆಂಚ್ ಓಪನ್ ಟೆನ್ನಿಸ್ ನ ಪಂದ್ಯದಲ್ಲಿ ಆಕೆ ವಿಶ್ವದ ನಂಬರ್ ಒನ್ ಇಗಾ ಸ್ವಿಯಾಟೆಕ್ ಅವರನ್ನು ಎದುರಿಸಲು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧಗೊಂಡಿದ್ದರು.
ಮೊದಲ ಸೆಟ್ ನವರೆಗೆ ಎಲ್ಲವೂ ಸರಿ ಇತ್ತು. ಈ ಸೆಟ್ ಅನ್ನೂ ಆಕೆ ಗೆದ್ದಕೊಂಡರು. ಆದರೆ, ಎರಡನೇ ಸೆಟ್ ಆರಂಭವಾಗುತ್ತಿದ್ದಂತೆಯೇ ಅವರಿಗೆ ಭಾರೀ ಹೊಟ್ಟೆನೋವು ಕಾಣಿಸಿಕೊಂಡಿತು. ಈ ನೋವಿನಲ್ಲಿಯೇ ಆಟವಾಡಿದ ಚೀನಾದ ಸ್ಟಾರ್ ಆಟಗಾರ್ತಿ ಎದುರಾಳಿಯಿಂದ 3-0 ಅಂತರದಿಂದ ಹಿಂದೆ ಬಿದ್ದರು.
ಆಟವನ್ನು ಮುಂದುವರಿಸಲು ಆಕೆಗೆ ಇಷ್ಟವಿತ್ತಾದರೂ ದೈಹಿಕವಾಗಿ ಕುಗ್ಗಿ ಹೋಗಿದ್ದರಿಂದ ಮಧ್ಯದಲ್ಲಿಯೇ ಮೊಟಕುಗೊಳಿಸಿ ಚಿಕಿತ್ಸೆ ಪಡೆಯಬೇಕಾಯಿತು. ಈ ದುರಾದೃಷ್ಟದ ಬಗ್ಗೆ ಮಾತನಾಡಿದ ಆಕೆ, ಮೊದಲ ಸೆಟ್ ನಲ್ಲಿ ನನಗೆ ಯಾವುದೇ ನೋವು ಇರಲಿಲ್ಲ. ಆದರೆ, ಎರಡನೇ ಸೆಟ್ ಸಂದರ್ಭದಲ್ಲಿ ನೋವನ್ನು ತಡೆದುಕೊಳ್ಳಲಾಗಲಿಲ್ಲ ಎಂದಿದ್ದಾರೆ.
ನಾನು ನಂಬರ್ ಒನ್ ಆಟಗಾರ್ತಿಯ ವಿರುದ್ಧ ಆಟವಾಡಿದ್ದು ಸಂತಸ ತಂದಿದೆ. ಒಂದು ನನ್ನ ಹೊಟ್ಟೆ ನೋವು ಇಲ್ಲದಿದ್ದರೆ ಆಟದಲ್ಲಿ ಇನ್ನೂ ಹೆಚ್ಚಾಗಿ ಎಂಜಾಯ್ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.